ಮದ್ದೂರು ರೈಲು ನಿಲ್ದಾಣ ಮೇಲ್ದರ್ಜೆ ಹಾಗೂ ವಿ.ಸಿ. ಫಾರ್ಮ್ ಗೇಟ್ನಲ್ಲಿ ಓವರ್ಬ್ರಿಡ್ಜ್ ನಿರ್ಮಾಣಕ್ಕೆ HDK ಮನವಿ ಸಲ್ಲಿಸಿದರು…!!

ಬೆಂಗಳೂರು–ಮಂಡ್ಯ–ಮೈಸೂರು ರೈಲು ಮಾರ್ಗದ ವಿವಿಧ ಅಭಿವೃದ್ಧಿ ಬೇಡಿಕೆಗಳ ಕುರಿತು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ HDK ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸತ್ ಭವನದಲ್ಲಿರುವ ಕಚೇರಿಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದರು.
ಮಂಡ್ಯ, ಮದ್ದೂರಿಗೆ ರೈಲು ನಿಲುಗಡೆ ಬೇಡಿಕೆ
ಬೆಂಗಳೂರು–ಮಂಗಳೂರು–ಮುರುಡೇಶ್ವರ ನಡುವೆ ಸಂಚರಿಸುವ ರೈಲು ಸಂಖ್ಯೆ 16585 ಅನ್ನು ಮಂಡ್ಯ ಜಿಲ್ಲೆಯ ಮದ್ದೂರು ಹಾಗೂ ಮಂಡ್ಯ ರೈಲು ನಿಲ್ದಾಣಗಳಲ್ಲಿ ನಿಲ್ಲಿಸುವಂತೆ ಕುಮಾರಸ್ವಾಮಿ ಮನವಿ ಮಾಡಿದರು. ಈ ಪ್ರಸ್ತಾವನೆಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಕ್ರಮದ ಭರವಸೆ ನೀಡಿದ್ದಾರೆ.
ಇದನ್ನು ಓದಿ : Metro ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ – ಎಷ್ಟು ಹೆಚ್ಚಳ?

ಮದ್ದೂರು ರೈಲು ನಿಲ್ದಾಣ ಮೇಲ್ದರ್ಜೆ ಯೋಜನೆ
ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮದ್ದೂರು ರೈಲು ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆ ಏರಿಸುವಂತೆ ಸಚಿವರು ಮನವಿ ಸಲ್ಲಿಸಿದರು. ಇದರಿಂದ ಸ್ಥಳೀಯರಿಗೆ ಉತ್ತಮ ಸೌಲಭ್ಯ ಸಿಗಲಿದೆ.

ಈ ಮಾರ್ಗದಲ್ಲಿ ರೈಲುಗಳ ನಿರಂತರ ಸಂಚಾರದಿಂದ ಸಾರ್ವಜನಿಕರು ಮತ್ತು ರೈತರಿಗೆ ತೊಂದರೆ ಉಂಟಾಗುತ್ತಿದೆ. ವಿ.ಸಿ. ಫಾರ್ಮ್ ಗೇಟ್ನಲ್ಲಿ ರೈಲ್ವೆ ಓವರ್ಬ್ರಿಡ್ಜ್ ಇಲ್ಲದಿರುವುದರಿಂದ ಸಂಚಾರ ಹಾಗೂ ಕೃಷಿ ಉತ್ಪನ್ನ ಸಾಗಣೆಗೆ ಅಡಚಣೆ ಆಗುತ್ತಿದೆ. ಹೀಗಾಗಿ ಅಲ್ಲಿ ತುರ್ತಾಗಿ ಓವರ್ಬ್ರಿಡ್ಜ್ ನಿರ್ಮಿಸುವಂತೆ ಪ್ರಸ್ತಾವನೆ ನೀಡಲಾಗಿದೆ.
MUST WATCH : TVS ELECTRIC AUTO ಶೋ ರೂಂ CLOSE.?- ಕಂಪನಿ ಮುಚ್ಚದಂತೆ ಆಟೋ ಚಾಲಕರ ಪಟ್ಟು




