Chikkamagaluru : ಹಿಂದೂ ಗೃಹಿಣಿ ಮನೆಯಲ್ಲಿ ಅರೆಬೆತ್ತಲಾಗಿ ಕಂಡುಬಂದ ಮುಸ್ಲಿಂ ಕಾಂಗ್ರೆಸ್ ಮುಖಂಡ, ಹಲ್ಲೆ.

ಕಳೆದ ವಾರ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ನಲ್ಲಿ ಮಹಿಳೆ ಜೊತೆ ಬಿಜೆಪಿ ಮುಖಂಡ ತಗ್ಲಾಕೊಂಡ ಪ್ರಕರಣದ ಬಳಿಕ, ಚಿಕ್ಕಮಗಳೂರಿನಲ್ಲಿ ವಿವಾಹಿತ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಇದ್ದು, ಅಕ್ಕಪಕ್ಕದ ಮನೆಯ ಯುವರು ಆತನಿಗೆ ಥಳಿಸಿದ್ದಾರೆ. ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ರಾತ್ರಿ ವೇಳೆ ವಿವಾಹಿತ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ರಾಹಿಲ್ ಇದ್ದು, ಇದನ್ನು ಕಂಡ ಅಕ್ಕಪಕ್ಕದ ಮನೆಯ ಯುವಕರು, ಪ್ರಶ್ನಿಸಿದ್ದು ಯುವಕರು ಥಳಿಸಿದ್ದಾರೆ.
ಮೆಡಿಸಿನ್ ಕೊಡಲು ಮನೆಗೆ ಬಂದಿದ್ದರು
ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಇದ್ದ ಫೋಟೋ ವೈರಲ್ ಆಗಿದ್ದು, ಕೂಡಲೇ ಅಕ್ಕಪಕ್ಕದ ಯುವಕರು ದೌಡಾಯಿಸಿ ಮನೆಯಲ್ಲಿದ್ದವರನ್ನು ಆಚೆ ಕರೆದು, ನಿನಗೆ ಹಿಂದೂ ಮಹಿಳೆಯ ಮನೆಯಲ್ಲಿ ಏನು ಕೆಲಸ, ಎಂದು ಕೆಲ ಯುವಕರು ಪ್ರಶ್ನಿಸಿ, ಕಾಂಗ್ರೆಸ್ ಮುಖಂಡನನ್ನು ಥಳಿಸಿದ್ದಾರೆ.
ಈ ವೇಳೆ ಮಹಿಳೆ ರಾಹಿಲ್ ನನ್ನ ಸ್ನೇಹಿತ, ನನಗೆ ಆರೋಗ್ಯ ಸರಿ ಇಲ್ಲ, ಅದಕ್ಕಾಗಿ ಮೆಡಿಸಿನ್ ಕೊಡಲು ಮನೆಗೆ ಬಂದಿದ್ದರು ಅಂತಾ ಮಹಿಳೆ ಹೇಳಿದ್ದಾಳೆ.

ಇದನ್ನು ಓದಿ : ಎರಡು ದಿನಗಳಲ್ಲೇ 11 ಹಸುಗಳ ನಿಗೂಢ ಮರಣ, ರೈತರಲ್ಲಿ ಹೆಚ್ಚಿದ ಆತಂಕ.!
ಸುಳ್ಳು ಅಟ್ರಾಸಿಟಿ ಕೇಸ್ – Chikkamagaluru
ಇನ್ನು ಕಾಂಗ್ರೆಸ್ ಮುಖಂಡನ ಜೊತೆಗಿದ್ದ ಮಹಿಳೆಯ ಗಂಡ ಕೀರ್ತಿ ಸೋಶಿಯಲ್ ಮಿಡಿಯಾ ಮೂಲಕ ಹೇಳಿಕೆ ರಿಲೀಸ್ ಮಾಡಿದ್ದು, ನಿನ್ನೆ ರಾತ್ರಿ 10: 30ಕ್ಕೆ ಮನೆ ಬಾಗಿಲು ಓಪನ್ ಇತ್ತು. ಬೈಕಿನಲ್ಲಿ ಬಂದ ರಾಹಿಲ್ ಷರೀಫ್ ನಮ್ಮ ಮನೆಯೊಳಗೆ ಹೋಗಿ, ಬಾಗಿಲು ಹಾಕಿಕೊಂಡರು. ನಾನು ನನ್ನ ಹೆಂಡ್ತಿಯ ತಮ್ಮ, ತಾಯಿ ಸೇರಿ ಅವರ ಸಂಬಂಧಿಕರಿಗೆ ಕಾಲ್ ಮಾಡಿ, ನಾನು ಹೇಳಿದ್ರೆ ನಂಬಲ್ಲ, ಬನ್ನಿ ಅಂತಾ ಕರೆದೆ. ಆಮೇಲೆ ಒಳಗೆ ಹೋದಾಗ ಇಬ್ಬರು ಬೆಡ್ ರೂಂನಲ್ಲಿ ಇದ್ದಾರೆ ಅಂತಾ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಅಲ್ದೇ ನಾವು ಗಂಡ-ಹೆಂಡ್ತಿ ದೂರವಾಗಿ 1 ವರ್ಷ ಆಯ್ತು, ಇಬ್ಬರು ಬೇರೆ ಇದ್ದೇವೆ. ಅದಕ್ಕೆ ಕಾರಣವೇ ರಾಹಿಲ್ ಷರೀಫ್ ಹಾಗೂ ಆಕೆ ಇಬ್ಬರೂ ಸೇರಿ ನನಗೆ ಮೋಸ ಮಾಡಿದ್ದಾರೆ. ವರ್ಷದ ಹಿಂದೆಯೂ ಗಲಾಟೆಯಾಗಿತ್ತು, ನನ್ನ ಮೇಲೆ ಆಕೆ ಕಡೆಯಿಂದ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ದರು ಎಂದು ಕೀರ್ತಿ ಅಳಲು ತೋಡಿಕೊಂಡಿದ್ದಾರೆ.
ಪಕ್ಕದ ಮನೆಯವರಿಂದ ಬಿತ್ತು ಗೂಸ
ಅದೇನೆ ಆಗಲಿ, ಕಟ್ಟಿಕೊಂಡ ಗಂಡ ಇದ್ರು ಕೂಡ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು, ಇದೀಗ ಅಕ್ಕ ಪಕ್ಕದ ಮನೆಯವರಿಂದ ಗೂಸ ತಿಂದಿದ್ದು ಮಾತ್ರ ದುರಂತವೇ ಸರಿ

ಇದನ್ನು ನೋಡಿ : ಬೆಂಗಳೂರಲ್ಲಿ ನಿಯಮ ಪಾಲಿಸದ ಪಿಜಿ, ಹೋಟೆಲ್ ಗಳಿಗೆ ಜಿಬಿಎ ಶಾಕ್: 2.57 ದಂಡ ವಸೂಲಿ




