ವಿಧಾನಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ Shivlinge Gowda ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ನಡೆದ ವಾಗ್ವಾದದ ವೇಳೆ ಶರಣು ಸಲಗರ ಅವರ ಪತ್ನಿ ಕುರಿತು ಮಾತನಾಡಿದ್ದಕ್ಕೆ ಕಾಂಗ್ರೆಸ್ ಶಾಸಕ Shivlinge Gowda ವಿಷಾದ ವ್ಯಕ್ತಪಡಿಸಿದ್ದಾರೆ. ಪ್ರಚೋದನೆಗೆ ಪ್ರತಿಕ್ರಿಯೆಯಾಗಿ ಹೇಳಿಕೆ ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದರು. ಹೆಣ್ಣುಮಕ್ಕಳ ಬಗ್ಗೆ ಮಾತನಾಡುವುದು ತಮ್ಮ ಉದ್ದೇಶವಲ್ಲ ಎಂದೂ ಹೇಳಿದರು.
ಸದನದಲ್ಲಿ ವಾಗ್ವಾದ ಹೇಗೆ ಶುರುವಾಯಿತು?
ವಿ.ಬಿ.ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ನಿರ್ಣಯ ಮಂಡಿಸಲು ಮುಂದಾದಾಗ ಬಿಜೆಪಿ ಸದಸ್ಯರು ಅಡ್ಡಿಪಡಿಸಿದ್ದರಿಂದ ವಾಗ್ವಾದ ಉಂಟಾಯಿತು. ಈ ವೇಳೆ ಶಿವಲಿಂಗೇಗೌಡ ಅವರು ಆಕ್ರೋಶದಿಂದ ಕಟುವಾಗಿ ಪ್ರತಿಕ್ರಿಯೆ ನೀಡಿದರು. ತಮ್ಮನ್ನು ‘ಕೊಬ್ಬರಿ ಕಳ್ಳ’ ಎಂದು ಕರೆದ ಕಾರಣ ತೀವ್ರವಾಗಿ ಉತ್ತರಿಸಿದ್ದಾಗಿ ಅವರು ಹೇಳಿದರು.
ಇದನ್ನು ಓದಿ : Metro ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ – ಎಷ್ಟು ಹೆಚ್ಚಳ?

ವೈಯಕ್ತಿಕ ಹೇಳಿಕೆಗಳ ಬಗ್ಗೆ ಸ್ಪಷ್ಟನೆ
ನನ್ನನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ ಶಿವಲಿಂಗೇಗೌಡ, ವೈಯಕ್ತಿಕ ಬದುಕಿನ ವಿಚಾರಗಳನ್ನು ಎಳೆದು ತರುವ ಅಗತ್ಯವೇನು ಎಂದು ಪ್ರಶ್ನಿಸಿದರು. ಆರ್ಎಸ್ಎಸ್ ಬಗ್ಗೆ ಗೌರವವಿದೆ, ಯಾವುದೇ ಅವಮಾನ ಉದ್ದೇಶ ಇರಲಿಲ್ಲ ಎಂದೂ ಸ್ಪಷ್ಟನೆ ನೀಡಿದರು.

ಜೆಡಿಎಸ್ ಆಕ್ರೋಶ – ಅನರ್ಹತೆಗೆ ಒತ್ತಾಯ
ಇನ್ನೊಂದೆಡೆ ಜೆಡಿಎಸ್ ಪಕ್ಷ ಶಿವಲಿಂಗೇಗೌಡರ ವರ್ತನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸದನದಲ್ಲಿ ಅವಾಚ್ಯ ಪದ ಬಳಕೆ, ಸಂಸದೀಯ ಮೌಲ್ಯಗಳಿಗೆ ಧಕ್ಕೆ ಹಾಗೂ ಸಭಾಧ್ಯಕ್ಷರ ಎದುರು ಅಸಭ್ಯ ವರ್ತನೆ ಅಕ್ಷಮ್ಯ ಅಪರಾಧ ಎಂದು ಆರೋಪಿಸಿದೆ.
ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಮುಂದಿನ ಎಲ್ಲಾ ಸದನಗಳಿಂದ ಅಮಾನತುಗೊಳಿಸಲು ಸ್ಪೀಕರ್ ಖಾದರ್ ಅವರಿಗೆ ಜೆಡಿಎಸ್ ಆಗ್ರಹಿಸಿದೆ.
ಇದನ್ನು ನೋಡಿ : ಏ RSS ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಾ- ಅಸೆಂಬ್ಲಿಯಲ್ಲಿ ಡ್ಯಾನ್ಸ್ ಮಾಡ್ತೀರಾ ಎಂದು ಕಿಡಿ




