
CRICKETER SHREYAS IYER : ಟೀಂ ಇಂಡಿಯಾದ ಪ್ರಖ್ಯಾತ ಬ್ಯಾಟ್ಸ್ಮನ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ತಮ್ಮ ಇಂಡಿಯಾ ಎ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದು, ಈ ನಿರ್ಧಾರದಿಂದ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅಯ್ಯರ್ ಅವರು ಈ ಕುರಿತು ಬಿಸಿಸಿಐಗೆ ಅಧಿಕೃತವಾಗಿ ಪತ್ರ ಬರೆದಿದ್ದು, ತಮ್ಮ ರಾಜೀನಾಮೆಯನ್ನು ಸಲ್ಲಿ ಸಿರುವುದು ತಿಳಿದುಬಂದಿದೆ. ಏಕೆಂದರೆ ಅವರು ಇಂಡಿಯಾ ಎ ತಂಡದ ನಾಯಕತ್ವದಿಂದ ಮಾತ್ರವಲ್ಲ, ಸಂಪೂರ್ಣವಾಗಿ ತಂಡದಿಂದಲೇ ಹೊರ ನಡೆದಿದ್ದಾರೆ. ತಮ್ಮ ನಿರ್ಧಾರಕ್ಕೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿರುವ ಅಯ್ಯರ್, ಮುಂದಿನ ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಯಿಂದ ದೂರವಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬೆಳವಣಿಗೆಯು ಆಸ್ಟ್ರೇಲಿಯಾ ಎ ವಿರುದ್ಧದ ಮಹತ್ವದ ಸರಣಿಗೆ ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿಯೇ ನಡೆದಿದ್ದು, ಆಟಗಾರನ ದಿಢೀರ್ ನಿರ್ಧಾರ ಭಾರತೀಯ ಕ್ರೀಡಾಭಿಮಾನಿಗಳಿಗೆ ನಿಜಕ್ಕೂ ಅಚ್ಚರಿ ಮತ್ತು ಶಾಕ್ ನೀಡಿದೆ.
ಈ ರಾಜೀನಾಮೆಯ ಹಿಂದಿನ ನಿಜವಾದ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಅಯ್ಯರ್ ಅವರ ಫಾರ್ಮ್, ಆಯ್ಕೆ ನೀತಿ ಮತ್ತು ವೈಯಕ್ತಿಕ ಆರೋಗ್ಯ ಸಮಸ್ಯೆಗಳ ಕುರಿತು ಊಹಾಪೋಹಗಳು ಶುರುವಾಗಿವೆ.




