ಅಬಕಾರಿ ಹಗರಣ ಆರೋಪದ ಚರ್ಚೆ ವೇಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ Shivalingegowda ಬಿಜೆಪಿ ಸದಸ್ಯರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತೀವ್ರ ಪದಪ್ರಯೋಗದ ಹಿನ್ನೆಲೆಯಲ್ಲಿ ಬಿಜೆಪಿ ಕ್ಷಮೆ ಕೇಳುವಂತೆ ಒತ್ತಾಯಿಸಿದೆ.

ವಿಧಾನಸಭೆಯಲ್ಲಿ ಅಬಕಾರಿ ಇಲಾಖೆ ಭ್ರಷ್ಟಾಚಾರ ಆರೋಪದ ವಿಚಾರವಾಗಿ ನಡೆದ ಚರ್ಚೆ ವೇಳೆ ಭಾರೀ ಗದ್ದಲ ಉಂಟಾಯಿತು. ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕ Shivalingegowda ಅವರು ಬಿಜೆಪಿ ಸದಸ್ಯರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪಿಸಿ ಸಚಿವ ತಿಮ್ಮಾಪೂರ ರಾಜೀನಾಮೆಗೆ ಬಿಜೆಪಿ ಅಹೋರಾತ್ರಿ ಧರಣಿ ನಡೆಸಿತ್ತು.
ಇದೇ ವಿಚಾರವಾಗಿ ವಿಧಾನಸಭೆಯಲ್ಲೂ ಪ್ರತಿಭಟನೆ ಮುಂದುವರಿದಾಗ, ಶಿವಲಿಂಗೇಗೌಡ ಅವರು ಬಿಜೆಪಿ ನಾಯಕರ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದನ್ನೂ ಓದಿ: ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ.!

ಸದನದಲ್ಲಿ ತೀವ್ರ ಮಾತಿನ ಚಕಮಕಿ
ಸದನದಲ್ಲಿ ಮಾತನಾಡಿದ ಶಿವಲಿಂಗೇಗೌಡ,
“ಇದು ವಿಧಾನಸಭೆಯಾ ಅಥವಾ ಡ್ಯಾನ್ಸ್ ಮಾಡುವ ಸ್ಥಳವಾ?” ಎಂದು ಪ್ರಶ್ನಿಸಿ ಬಿಜೆಪಿ ಸದಸ್ಯರ ವಿರುದ್ಧ ಕಿಡಿಕಾರಿದರು.
ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ, ಬಿಜೆಪಿ ಸದಸ್ಯ ಶರಣು ಸಲಗಾರ್ ಸೇರಿದಂತೆ ಹಲವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವರ ಹೇಳಿಕೆಗಳು ಸದನದಲ್ಲಿ ಗದ್ದಲಕ್ಕೆ ಕಾರಣವಾಗಿದ್ದು, ಕೆಲವೊಂದು ತೀವ್ರ ಪದಪ್ರಯೋಗಗಳು ವಿವಾದಕ್ಕೂ ದಾರಿ ಮಾಡಿಕೊಟ್ಟವು.
ಶಿವಲಿಂಗೇಗೌಡ ಅವರು,
ತಮ್ಮ ವಿರುದ್ಧ ವೈಯಕ್ತಿಕ ಟೀಕೆ ನಡೆಯುತ್ತಿದೆ ಎಂದು ಆರೋಪಿಸಿ, ಇಂತಹ ವಿಪಕ್ಷವನ್ನು ನೋಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಬ್ಬರಿ ವಿಚಾರದಲ್ಲಿ ಯಾರು ಹೋರಾಟ ಮಾಡಿದ್ದಾರೆ ಎಂದು ಅರಸೀಕೆರೆ ಹೋಗಿ ಕೇಳಿ ಎಂದು ಹೇಳಿ, ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.
ಬಿಜೆಪಿ ಕ್ಷಮೆ ಕೇಳುವಂತೆ ಆಗ್ರಹ
ಇನ್ನೊಂದೆಡೆ, ಸದನದಲ್ಲಿ ಏಕವಚನ ಹಾಗೂ ತೀವ್ರ ಪದಪ್ರಯೋಗ ಬಳಸಿದ ಹಿನ್ನೆಲೆ,
ಶಿವಲಿಂಗೇಗೌಡರು ಕ್ಷಮೆ ಕೇಳಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.
ಈ ಘಟನೆ ವಿಧಾನಸಭೆಯಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
MUST WATCH : ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ ಹೆದ್ದಾರಿ ತಡೆಗೋಡೆ ಬಿದ್ದಿದ್ರು ರಿಪೇರಿ ಇಲ್ಲ




