
ಇತ್ತೀಚಿನ ದಿನ ಸೈಬರ್ ವಂಚಕರ ಕಾಟ ಹೆಚ್ಚಾಗ್ತಾ ಇದ್ದು, ನಟ- ನಟಿ, ರಾಜಕಾರಣಿಗಳು ಹಾಗೂ ಶ್ರೀಮಂತರಿಗೆ ಗಾಳ ಹಾಕ್ತಾ ಇದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಹಾಗೂ ಸಂಸದ ಸುಧಾಕರ್ ಪತ್ನಿಗೆ ಸೈಬರ್ ವಂಚಕರು ಯಾಮಾರಿಸಿದ್ದ ಪ್ರಕರಣದ ಬೆನ್ನಲ್ಲೇ, ಇದೀಗ ಹಾಸನ ಜಿಲ್ಲೆ ಅರಸೀಕೆರೆಯ ಪ್ರಸಿದ್ಧ ವೈದ್ಯರಿಗೂ ಸೈಬರ್ ಕಾಟ ಶುರುವಾಗಿದ
ಹೌದು ಕಿರುತರೆ ನಟ ಉಪೇಂದ್ರ ಪತ್ನಿ ಬಳಿಕ ಸೈಬರ್ ವಂಚನೆ ಕೇಸ್ ಅರಸೀಕೆರೆ ನಗರಕ್ಕೆ ತಲುಪಿದ್ದು, ಹಾಸನ ಜಿಲ್ಲೆಯ ಪ್ರಸಿದ್ಧ ವೈದ್ಯರಾದ ಡಾ. ಶಿಬರ ಹೆಗ್ಡೆ ರವರ ವಾಟ್ಸಪ್ ಯಾಕ್ ಆಗಿದ್ದು, ಅವರ ಕಾಂಟಾಕ್ಟ್ ನಲ್ಲಿದ್ದ ಎಲ್ಲಾ ನಂಬರ್ಗಳಿಗೂ ಹಣ ಹಾಕುವಂತೆ ಮೆಸೇಜ್ ಕಳುಹಿಸಿ ಸುಮಾರು ಮೂರು ಜನರಿಂದ ಎರಡು ಲಕ್ಷ ರೂಪಾಯಿ ಯಾಕರ್ಗಳು ಹಾಕಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೊರಿಯರ್ ಮಾಡುವ ವ್ಯಕ್ತಿಯೋರ್ವನ ಸೋಗಿನಲ್ಲಿ ಕಾಲ್ ಮಾಡಿದ್ದು, ಓಟಿಪಿ ಪಡೆದುಕೊಂಡಿದ್ದು, ನನ್ನ ವಾಟ್ಸಾಪ್ ಹ್ಯಾಕ್ ಆಗಿದೆ ಎಂದು ಡಾಕ್ಟರ್ ಶಿಬರ ಹೆಗ್ಡೆ ತಿಳಿಸಿದ್ರು.
ಈ ಸಂಬಂಧ ಅರಸೀಕೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ, ಇನ್ನು ಬೇರೆ ಬೇರೆಯವರ ಸೋಗಿನಲ್ಲಿ ಕಾಲ್ ಮಾಡುತ್ತಾರೆ. ಇಂತಹ ಫ್ರಾಡ್ ಕಾಲ್ ಬಂದ್ರೆ ರಿಯಾಕ್ಟ್ ಮಾಡದಂತೆ ಸೈಬರ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.




