
CYBER FRUAD : ಚಿಕ್ಕಬಳ್ಳಾಪುರದ ಸಂಸದ ಡಾ,ಕೆ ಸುಧಾಕರ್ ಅವರ ಪತ್ನಿ ಡಾ. ಪ್ರೀತಿಗೆ ಆಗಸ್ಟ್ 26ರಂದು ಸೈಬರ್ ವಂಚಕರು ಹೆದರಿಸಿ, ಅವರ ಅಕೌಂಟ್ನಿಂದ ವಂಚಕರು ಸುಮಾರು 14 ಲಕ್ಷ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಒಂದು ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಭಾರೀ ಸಂಚಲನವನ್ನು ಸೃಷ್ಟಿ ಮಾಡಿತ್ತು. ಇದೀಗ ಈ ಪ್ರಕರಣ ಸುಖಾಂತ್ಯ ಕಂಡಿದ್ದು, ಡಾ. ಪ್ರೀತಿ ಅವರ ಅಕೌಂಟ್ಗೆ ವಂಚಕರು ಅಮೌಂಟ್ ಟ್ರಾನ್ಸಫರ್ ಮಾಡಿದ್ದಾರೆ.
ಆಗಸ್ಟ್ 26 ರಂದು ಒಂದು ಫೋನ್ ಕರೆಯಿಂದಾಗಿ ಸಂಸದ ಸುಧಾಕರ್ ಪತ್ನಿ ಡಾ. ಪ್ರಿಯಾ ಅವರು ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು. ಮುಂಬೈ ಸೈಬರ್ ಕ್ರೈಂ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು, ‘ನಿಮ್ಮ ಹೆಸರಿನಲ್ಲಿ ಅಕ್ರಮ ಹಣ ವರ್ಗಾವಣೆ ನಡೆಯುತ್ತಿದೆ, ತನಿಖೆಗೆ ಸಹಕರಿ ಸದಿದ್ದರೆ ನಿಮ್ಮನ್ನು ಬಂಧಿಸುತ್ತೇವೆ’ ಎಂದು ಬೆದರಿಸಿದ್ದರು. ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ತಂತ್ರದ ಮೂಲಕ ಭಯ ಹುಟ್ಟಿಸಿದ ಹೈಟೆಕ್ ಖದೀಮರು ಡಾ. ಪ್ರಿಯಾ ಅವರಿಂದಲೇ 14 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದರು.
ಆದ್ರೆ ಹಣ ಕಳೆದುಕೊಂಡ ತಕ್ಷಣವೇ ಎಚ್ಚೆತ್ತ ಡಾ. ಪ್ರಿಯಾ, ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಚಿಕ್ಕಬಳ್ಳಾಪುರ ಸೈಬರ್ ಪೊಲೀಸರು, ಹಣ ವರ್ಗಾವಣೆಯಾಗಿದ್ದ ಖಾತೆಯನ್ನು ಫ್ರೀಜ್ ಮಾಡಿ, ಹಣ ಮತ್ತಷ್ಟು ವರ್ಗಾ ವಣೆಯಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ..




