Kitchen Recipe : ಮನೆಲ್ಲೇ ಹೋಟೆಲ್ ಸ್ಟೈಲ್ ರುಚಿಯ ಪೆಪ್ಪರ್ ಚಿಕನ್ ಕಬಾಬ್ ಮಾಡೋದು ತುಂಬಾ ಸುಲಭ. ಕಾಳುಮೆಣಸಿನ ಘಮಘಮ, ಕರಿಬೇವು ಸುವಾಸನೆ ಮತ್ತು ಕರಕರೆ ಟೆಕ್ಸ್ಚರ್ ಈ ರೆಸಿಪಿಯ ಹೈಲೈಟ್. ಸ್ಟಾರ್ಟರ್ ಆಗಿಯೂ, ಸಂಜೆ ಸ್ನ್ಯಾಕ್ ಆಗಿಯೂ ಸೂಪರ್ ಆಯ್ಕೆ.

Kitchen Recipe : ಬೇಕಾಗುವ ಪದಾರ್ಥಗಳು
- ಚಿಕನ್ – 1 ಕೆಜಿ
- ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
- ಹಸಿಮೆಣಸಿನಕಾಯಿ ಪೇಸ್ಟ್ – 1 ಸಣ್ಣ ಬಟ್ಟಲು (5 ಮೆಣಸಿನಕಾಯಿ)
- ನಿಂಬೆಹಣ್ಣು – 1
- ಉಪ್ಪು – ರುಚಿಗೆ ತಕ್ಕಷ್ಟು
- ಮೊಟ್ಟೆ – 1
- ಅರಿಶಿಣ ಪುಡಿ – ½ ಚಮಚ
- ಕಾಳು ಮೆಣಸು ಪುಡಿ – 3 ಚಮಚ
- ದನಿಯಾ ಪುಡಿ – 1 ಚಮಚ
- ಗರಂ ಮಸಾಲೆ ಪುಡಿ – 1 ಚಮಚ
- ಕರಿಬೇವು – ಸ್ವಲ್ಪ (ಸಣ್ಣಗೆ ಕತ್ತರಿಸಿದ)
- ಕೊತ್ತಂಬರಿ ಸೊಪ್ಪು & ಪುದೀನಾ – ಸ್ವಲ್ಪ
- ಕಸ್ತೂರಿ ಮೇಥಿ – 1 ಚಮಚ
- ಜಜ್ಜಿದ ಬೆಳ್ಳುಳ್ಳಿ – 10 ಎಸಳು
- ಕಾರ್ನ್ ಫ್ಲೋರ್ – 6–7 ಚಮಚ
- ಮೈದಾ ಹಿಟ್ಟು – 3 ಚಮಚ
- ಸೋಯಾ ಸಾಸ್ – 1 ಚಮಚ
- ಎಣ್ಣೆ – ಕರಿಯಲು
ಚಿಕನ್ ಮ್ಯಾರಿನೇಟ್ ಮಾಡುವ ವಿಧಾನ
ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು ನೀರು ಸಂಪೂರ್ಣವಾಗಿ ಸೋರಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ಚಿಕನ್, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಪೇಸ್ಟ್, ನಿಂಬೆಹಣ್ಣಿನ ರಸ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಇದನ್ನು ಸುಮಾರು 30 ನಿಮಿಷ ನೆನೆಯಲು ಬಿಡಿ.
ಮಸಾಲೆ ಮಿಶ್ರಣ ತಯಾರಿಸುವ ವಿಧಾನ
ಮತ್ತೊಂದು ಪಾತ್ರೆಯಲ್ಲಿ ಮೊಟ್ಟೆ, ಅರಿಶಿಣ ಪುಡಿ, ಕಾಳುಮೆಣಸು ಪುಡಿ, ದನಿಯಾ ಪುಡಿ, ಗರಂ ಮಸಾಲೆ, ಕರಿಬೇವು, ಕೊತ್ತಂಬರಿ, ಪುದೀನಾ, ಕಸ್ತೂರಿ ಮೇಥಿ, ಜಜ್ಜಿದ ಬೆಳ್ಳುಳ್ಳಿ, ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಸೋಯಾ ಸಾಸ್ ಮತ್ತು ಸ್ವಲ್ಪ ಉಪ್ಪು ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಕಾರ್ನ್ ಫ್ಲೋರ್ ಅಥವಾ ಕಾಳುಮೆಣಸು ಪುಡಿ ಹೆಚ್ಚಿಸಬಹುದು.
ಈ ಮಿಶ್ರಣವನ್ನು ಚಿಕನ್ಗೆ ಸೇರಿಸಿ 1 ಗಂಟೆ ನೆನೆಯಲು ಬಿಡಿ.
ಪೆಪ್ಪರ್ ಚಿಕನ್ ಕಬಾಬ್ ಕರಿಯುವ ವಿಧಾನ
ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಬಿಸಿ ಮಾಡಿ.
ಎಣ್ಣೆ ಚೆನ್ನಾಗಿ ಕಾದ ನಂತರ ಮಸಾಲೆ ಮಿಶ್ರಿತ ಚಿಕನ್ ತುಂಡುಗಳನ್ನು ಒಂದೊಂದಾಗಿ ಹಾಕಿ.
4–5 ನಿಮಿಷ ಮಧ್ಯಮ ಉರಿಯಲ್ಲಿ ಬೇಯಿಸಿ ತೆಗೆದುಿಡಿ.
ನಂತರ 10 ನಿಮಿಷ ಬಿಡಿಸಿ, ಮತ್ತೆ ಕಾದ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿ.
ಹೀಗೆ ಮಾಡಿದರೆ ಕಬಾಬ್ ಹೊರಗೆ ಕರಕರೆ, ಒಳಗೆ ಸಾಫ್ಟ್ ಆಗಿರುತ್ತದೆ.
ರುಚಿಕರ ಪೆಪ್ಪರ್ ಚಿಕನ್ ಕಬಾಬ್ ಸವಿಯಲು ಸಿದ್ಧ
ಹಾಟ್ ಹಾಟ್ ಪೆಪ್ಪರ್ ಚಿಕನ್ ಕಬಾಬ್ ಅನ್ನು ನಿಂಬೆ ತುಂಡು, ಈರುಳ್ಳಿ ಸ್ಲೈಸ್ ಮತ್ತು ಚಟ್ನಿಯ ಜೊತೆ ಸವಿಯಿರಿ. ಪಾರ್ಟಿ, ಫ್ಯಾಮಿಲಿ ಡಿನ್ನರ್ ಅಥವಾ ಸಂಜೆ ಟೀ ಸಮಯಕ್ಕೆ ಪರ್ಫೆಕ್ಟ್ ಸ್ಟಾರ್ಟರ್




