
SIRA NEWS : ಇನ್ನೇನು ಎರಡು ಮೂರು ತಿಂಗಳಲ್ಲಿ ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಎಲೆಕ್ಷನ್ ಶುರುವಾಗುವ ಲಕ್ಷಣಗಳು ಇದ್ದು, ಚುನಾವಣೆಗಾಗಿ ತೆರೆ ಮರೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಒಂದ್ಕಡೆ ಟಿಕೆಟ್ಗಾಗಿ ಆಕಾಂಕ್ಷಿಗಳು ನಾಯಕರ ಹಿಂದೆ ದುಂಬಾಲು ಬಿದ್ದರೆ, ಮತ್ತೊಂದ್ಕಡೆ ಟಿಕೆಟ್ಗಾಗಿ ಹಿಂಬಾಲಕರ ನಡುವೆಯೇ ಕಚ್ಚಾಟ ಶುರುವಾಗಿದೆ,
ಶಿರಾದಲ್ಲಿ ತಾಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣಾ ಕಾವು ರಂಗೇರುತಿದ್ದು, ಟಿಕೆಟ್ಗಾಗಿ ನಾಯರ ಹಿಂದೆ ಸುತ್ತಾಡುತ್ತಾ ಇದ್ದಾರೆ. ಶಿರಾ ತಾಲೂಕಿನಲ್ಲಿ ಪಂಚಾಯ್ತಿ ಎಲೆಕ್ಷನ್ಗಾಗಿ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿಗಳು ಕಾಂಗ್ರೆಸ್ ಶಾಸಕರಾದ ಟಿ.ಬಿ ಜಯಚಂದ್ರ ಅವರ ಪುತ್ರ ಸಂಜಯ್ ಜಯಚಂದ್ರ ಅವರ ಹಿಂದೆ ಅವರ ಬೆಂಬಲಿಗರು ಓಡಾಡ್ಥಾ ಇದ್ದು, ಹಿಂಬಾಲಕರ ನಡುವೆಯೇ ಜ್ವಾಲೆ ಶುರುವಾಗಿದೆ. ಹೌದು ಪಂಚಾಯ್ತಿ ಎಲೆಕ್ಷನ್ ಟಿಕೆಟ್ಗಾಗಿ ನಾಯಕರ ಹಿಂಬಾಲಕರ ನಡುವೆ ಕಿಚ್ಚು ಶುರುವಾಗಿದ್ದು, ಸಾಮಾಜಿಕ ಜಾಲ ತಾಣದಲ್ಲಿ ಕಚ್ಚಾಟ ಬಯಲಾಗಿದೆ.
ಅದೇನೆ ಆಗಲಿ ಎಂಎಲ್ಎ ಎಲೆಕ್ಷನ್ ನಂತೆಯೇ ಪಂಚಾಯ್ತಿ ಎಲೆಕ್ಷನ್ ಕಾವು ಜೋರಾಗಿ ನಡೆಯಲಿದ್ದು, ಟಿಕೆಟ್ಗಾಗಿ ಆಕಾಂಕ್ಷಿಗಳು ನಾಯಕರ ಹಿಂದೆ ಓಡಾಡುವ ಹಿಂಬಾಲಕರ ಕಚ್ಚಾಟ ಇದೀಗ ಬೀದಿಗೆ ಬಂದಿರೋದು ಮುಂದಿನ ದಿನಗಳಲ್ಲಿ ಯಾವ ರೀತಿ ಹಿಂಬಾಲಕರ ಕಚ್ಚಾಟ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದುನೋಡಬೇಕಿದೆ,




