Bengaluru : ಕಾರ್ಮಿಕರು ಅನುಮಾನಾಸ್ಪದ ಸಾವು – ಬೆಚ್ಚಿಬಿದ್ದ ಮುತ್ಸಂದ್ರ ಗ್ರಾಮದ ಜನ.

ಬಾಡಿಗೆ ಮನೆಯಲ್ಲಿ ವಾಸವಿದ್ದ ನಾಲ್ಕು ಜನರ ಅಸ್ಸಾಂ ಮೂಲಕ ಕಾರ್ಮಿಕರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ Bengaluru ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ಸಂದ್ರ ಗ್ರಾಮದಲ್ಲಿ ನಡೆದಿದೆ.

ಕಾರ್ಮಿಕರ ಅನುಮಾನಾಸ್ಪದ ಸಾವು
ಇನ್ನು ಮೃತಪಟ್ಟವರನ್ನು 25 ವರ್ಷದ ಕೋಗೇಶ್ವರ, 24 ವರ್ಷದ ನಿರೇಂದ್ರನಾಥ್, 20 ವರ್ಷದಧನಂಜಯ್ ಹಾಗೂ 25 ವರ್ಷದ ಡಾಕ್ಟರ್ ಟೈಡ್ ಎಂದು ತಿಳಿದುಬಂದಿದೆ. ಈ ನಾಲ್ಕು ಜನರು ಕೂಡ ಕೋಕಾಕೋಲಾ ವೇರ್ಹೌಸ್ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಇವರೆಲ್ಲರೂ ಕೂಡ ಮುತ್ಸಂದ್ರ ಗ್ರಾಮದಲ್ಲಿ ಛೋಟಾಸಾಭ್ ಎನ್ನುವವರಿಗೆ ಸೇರಿದ ಲೇಬರ್ ಶೆಡ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸೂಲಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಲ್ಕು ಜನರ ಸಾವಿಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : Chitradurga|ಮುರುಘಾಶ್ರೀಗೆ ಮತ್ತೊಮ್ಮೆ ಎದುರಾದ ಸಂಕಷ್ಟ!
ಒಳಗಡೆ ಏನಾಗಿದೆಯೋ ಗೊತ್ತಿಲ್ಲ
ಇನ್ನು ಈ ಕುರಿತು ಕೆಲ ಕಾರ್ಮಿಕರು ಮಾಹಿತಿ ನೀಡಿದ್ದು, ಸರ್ ಆ ನಾಲ್ಕು ಜನ ಕೂಡ ಅಸ್ಸಾಂನಿಂದ ಬಂದು ಇಲ್ಲಿ ಕೊಕೋಕೋಲಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವೆರಲ್ಲರೂ ಕೂಡ ಛೋಟಸಾಬ್ ಎನ್ನುವರ ಮನೆಯಲ್ಲಿ ಬಾಡಿಗೆ ಇದ್ದರು. ಕೆಲಸ ಮುಗಿಸಿ ನಾಲ್ಕು ಜನ ಕೂಡ ರೂಂಗೆ ಹೋಗಿದ್ದಾರೆ. ಅಲ್ಲಿ ಏನಾಗಿದೆಯೋ ಗೊತ್ತಿಲ್ಲ.
ಆದ್ರೆ ಸೆಕೆಂಡ್ ಶಿಫ್ಟ್ ಮುಗಿಸಿಕೊಂಡು ಬಂದ ಇನ್ನೋ ಕಾರ್ಮಿಕ ಕದ ತಟ್ಟಿದ್ದಾನೆ. ಆದ್ರೆ ಯಾರು ಬಾಗಿಲು ತೆಗೆದಿಲ್ಲ. ಒಳಗಡೆಯಿಂದ ಸುಟ್ಟ ವಾಸನೆ ಬಂದಿದೆ.
ಕೂಡಲೇ ಬಾಗಿಲನ್ನು ಹೊಡೆದು ನೋಡಿದ್ರೆ ನಾಲ್ಕು ಜನರು ಕೂಡ ಸಾವನ್ನಪ್ಪಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಒಳಗಡೆ ಏನಾಗಿದೆಯೋ ಗೊತ್ತಿಲ್ಲ. ಪೊಲೀಸರ ತನಿಖೆಯಿಂದ ಮಾತ್ರ ತಿಳಿದುಬರಬೇಕಿದೆ ಎಂದರು.

ಸಾವಿನ ಸುತ್ತ ಅನುಮಾನ
ಒಟ್ಟಿನಲ್ಲಿ ಈ ಅಸ್ಸಾಂ ಮೂಲದ ನಾಲ್ಕು ಜನರ ಸಾವಿನ ಸುತ್ತ ಅನುಮಾನ ಮೂಡಿದ್ದು, ಸಾವಿಗೆ ನಿಜವಾದ ಕಾರಣವಾದ್ರೂ ಏನು ಎಂಬುದು ಪೊಲೀಸರ ತನಿಖೆಯಿಂದ ಮಾತ್ರ ತಿಳಿದುಬರಬೇಕಿದೆ.
ಇದನ್ನು ನೋಡಿ : ದೇವರಿಗೆ ಚಿತ್ರ ವಿಚಿತ್ರ ಹರಕೆ ಪತ್ರಗಳು ಹುಂಡಿ ಎಣಿಸುವಾಗ ಫುಲ್ ಶಾಕ್




