
Actor Mohanlal Dadasaheb : ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಭಾರತೀಯ ಸಿನಿಮಾ ರಂಗದಲ್ಲಿ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ, 2025ರ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿನೀಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರಶಸ್ತಿ ಯನ್ನು ಸ್ವೀಕರಿಸಿದ ಮೋಹನ್ ಲಾಲ್ ಅವರು, ಇದನ್ನು ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಅರ್ಪಣೆಮಾಡಿದರು.
ಸಿನಿ ರಂಗದ ಶ್ರೇಷ್ಠ ಪ್ರಶಸ್ತಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದಿರುವ ಮೋಹನ್ ಲಾಲ್ ಅವರ ನಿಜವಾದ ಹೆಸರು ಮೋಹನ್ ಲಾಲ್ ವಿಶ್ವನಾಥನ್. ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿನ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿ ನಯಿಸಿರುವ ಮೋಹನ್ ಲಾಲ್ ಅವರು, 1978ರ “ತಿರನೊತ್ತಮ್” ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು.
ಮೋಹನ್ ಲಾಲ್ ಅವರು 1960, ಮೇ 21 ರಂದು ಕೇರಳದ ಪತ್ತನಂತಿಟ್ಟದಲ್ಲಿ ಜನಿಸಿದ್ದರು. ಸದ್ಯ ಇವರಿಗೆ 65 ವರ್ಷಗಳು ತುಂಬಿವೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಲಾಲ್, ಲಾಲು ಹಾಗೂ ಲಾಲೆಟ್ಟೈನ್ ಎಂದು ಕರೆಯುತ್ತಾರೆ. ಮೋಹಲ್ ಲಾಲು ಸಿನಿ ರಂಗಕ್ಕೆ 1978ರಲ್ಲಿ ತಿರನೊತ್ತಮ್ ಎನ್ನುವ ಸಿನಿಮಾ ಮೂಲಕ ಡೆಬ್ಯೂ ಮಾಡಿದರು. ಅಲ್ಲಿಂದ ತಮ್ಮ ಸುದೀರ್ಘ 40 ವರ್ಷಗಳನ್ನು ಸಿನಿಮಾ ಕ್ಷೇತ್ರದಲ್ಲೇ ಕಳೆದಿದ್ದಾರೆ. ಚಿತ್ರರಂಗದಲ್ಲಿ ಎಲ್ಲವನ್ನು ಬಲ್ಲವರು ಆಗಿದ್ದಾರೆ. ಇವರು 40 ವರ್ಷಗಳಲ್ಲಿ ಸುಮಾರು 400 ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಮಾಡಿದ್ದಾರೆ.
ಇನ್ನು ಮೋಹಲ್ ಲಾಲ್ ಅವರಿಗೆ ಈ ಮೊದಲು ಭಾರತ ಸರ್ಕಾರದಿಂದ 2001ರಲ್ಲಿ ಪದ್ಮಶ್ರೀ, 2019ರಲ್ಲಿ ಪದ್ಮಭೂಷಣ್ ಪ್ರಶಸ್ತಿ ನೀಡಲಾಗಿತ್ತು. ಸದ್ಯ 2025ರಲ್ಲಿ ಇದೀಗ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.





