
CRIME NEWS : ಮಕ್ಕಳ ಪಾಲನೆ ಸಂಬಂಧಿತ ಕೌಟುಂಬಿಕ ವಿವಾದ ಬಗೆಹರಿಸಿಕೊ ಳ್ಳಲು ಬಾಲನ್ಯಾಯ ಮಂಡಳಿಗೆ ಆಗಮಿಸಿದ್ದ ವೇಳೆ ಪತಿಯೇ ಪತ್ನಿಯನ್ನು ಚಾಕು ವಿನಿಂದ ಇರಿದು ಹತ್ಯೆಗೈದ ಘಟನೆ ನೆನ್ನೆ ದಾವಣಗೆರೆಯಲ್ಲಿ ನಡೆದಿದೆ.
ಕಾಡಜ್ಜಿ ಗ್ರಾಮದ ನಿವಾಸಿ ಮುಷ್ಕಾನ್ ಬಾನು (26) ಕೊಲೆಯಾದ ಮಹಿಳೆಯಾಗಿದ್ದಾರೆ. ಇವರ ಪತಿ ಕಲೀಂ ಉಲ್ಲಾ (35) ಕೊಲೆ ಮಾಡಿದ ಆರೋಪಿ. ಇಬ್ಬರ ನಡುವೆ ನಡೆಯು ತ್ತಿದ್ದ ದಾಂಪತ್ಯ ಕಲಹ ಹಿನ್ನೆಲೆ ಮಕ್ಕಳ ಪಾಲನೆ ಸಂಬಂಧ ವಿಚಾರವನ್ನು ಇತ್ಯರ್ಥ ಪಡಿಸಲು ಬಾನು ಅವರು ಎಂಸಿಸಿ ಬಡಾವಣೆಯ ಬಾಲನ್ಯಾಯ ಮಂಡಳಿ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಲೀಂಉಲ್ಲಾ ಪತ್ನಿ ಬಾನು ಅವರ ಮೇಲೆ ಬಾಲ ನ್ಯಾಯ ಮಂಡಳಿ ಆವರಣದಲ್ಲಿಯ ಹಲ್ಲೆ ನಡೆಸಿ, ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ ಎನ್ನ ಲಾಗಿದೆ.
ಅಲ್ಲದೇ, ಜಗಳ ಬಿಡಿಸಲು ಮುಂದಾದ ಬಾನು ಅವರ ತಾಯಿ ಪರ್ಝನ್ (50) ಕೂಡ ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.




