
MYSURU NEWS : ಇಂದು ಮೈಸೂರು ನಗರದ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ಮಹಿಷ ದಸರಾ ಆಚರಣೆಯ ಹಿನ್ನೆಲೆಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿ ದ್ದಾರೆ. ಈ ಕುರಿತು ಮೈಸೂರು ಪೊಲೀ ಸ್ ಆಯುಕ್ತರು ಆದೇಶ ಹೊರಡಿಸಿದ್ದು, ನಿಷೇಧಾಜ್ಞೆ ಸೆಪ್ಟೆಂಬರ್ 24ರ ತಡರಾತ್ರಿ 12 ಗಂಟೆಯಿಂದ ಸೆಪ್ಟೆಂಬರ್ 25ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿ ರಲಿದೆ.
ಚಾಮುಂಡಿ ಬೆಟ್ಟದ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ, ಮೆರವಣಿಗೆ, ಸಮಾರಂಭಗಳನ್ನು ನಡೆಸುವುದು ನಿಷಿದ್ಧ ವಾಗಿದೆ. ಭದ್ರತಾ ಕ್ರಮವಾಗಿ ಈ ಕ್ರಮ ಕೈ ಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವು ವೈಭವವಾಗಿ ನಡೆಯುತ್ತಿದ್ದು, ವಿಂಟೇಜ್ ಕಾರುಗಳ ಪ್ರದರ್ಶನ, ಯುವ ದಸರಾ ಸೇರಿದಂತೆ ಹಲವಾರು ಆಕರ್ಷ ಣೆಗಳು ಜನರ ಮನಸೆಳೆಯುತ್ತಿವೆ. ಇತ್ತೀಚೆಗೆ ಯುವ ದಸರಾಕ್ಕೆ ಚಾಲನೆ ಸಿಕ್ಕಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ‘ಮ್ಯೂಸಿಕ್ ಕಲರವ’ ಕಾರ್ಯಕ್ರಮ ಭಾರೀ ಪ್ರೇಕ್ಷಕರನ್ನು ಆಕರ್ಷಿಸಿತು. ಇಂದು ಮಹಿಷ ದಸರಾ ಹಿನ್ನೆಲೆ. ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.




