IOA ಅಧ್ಯಕ್ಷೆ ಪಿ.ಟಿ ಉಷಾ ಪತಿ Srinivasan ನಿಧನ.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಪಿ.ಟಿ. ಉಷಾ ಅವರ ಪತಿ V. Srinivasan (64) ಅವರು ನಿಧನರಾಗಿದ್ದಾರೆ. ಶುಕ್ರವಾರ ನಡುರಾತ್ರಿ ಸುಮಾರು 1 ಗಂಟೆ ವೇಳೆ ತಿಕ್ಕೋಡಿ ಪೆರುಮಾಳ್ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾರೆ.
ಚಿಕಿತ್ಸೆ ಫಲಿಸದೇ ಸಾವು
ಇನ್ನು ಕುಟುಂಬಸ್ಥರು ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ವೇಳೆ ಪಿ.ಟಿ. ಉಷಾ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.

ಇದನ್ನು ಓದಿ : Belagavi|ಸಮಸ್ಯೆ ಹೇಳಲು ಬಂದವನಿಗೆ ಕಚ್ಚಿದ ಗ್ರಾಮ ಪಂಚಾಯತ್ ಅಧ್ಯಕ್ಷ?
ಭದ್ರತಾ ಪಡೆಯಲ್ಲಿ ಡೆಪ್ಯೂಟಿ ಎಸ್ಪಿ
ಶ್ರೀನಿವಾಸನ್ ಅವರು ಕೇರಳದ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಕುಟ್ಟಿಕ್ಕಾಡ್ನ ವೆಂಗಲಿ ಥರಾವದ್ನ ನಾರಾಯಣನ್ ಮತ್ತು ಸರೋಜಿನಿ ದಂಪತಿಯ ಪುತ್ರ. ಅವರು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಡೆಪ್ಯೂಟಿ ಎಸ್ಪಿಯಾಗಿ ನಿವೃತ್ತರಾಗಿದ್ದರು. 1991 ರಲ್ಲಿ ದೂರದ ಸಂಬಂಧಿಯಾಗಿದ್ದ ಪಿ.ಟಿ. ಉಷಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಡಾ. ಉಜ್ವಲ್ ವಿಘ್ನೇಶ್ ಎಂಬ ಮಗನಿದ್ದಾನೆ.
ಪ್ರಧಾನಿ ಸಂತಾಪ
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಐಒಎ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ತಕ್ಷಣ ಕರೆ ಮಾಡಿ ಅವರ ಪತಿಯ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು.

ಇದನ್ನು ನೋಡಿ : GOLD RATE | ಚಿನ್ನ ಅಲ್ಲ ಬೆಳ್ಳಿ ದರವೂ ಹೆಚ್ಚಳ ಇವತ್ತಿನ ರೇಟ್ ಕೇಳಿದ್ರೆ ಶಾಕ್ ಆಗ್ತಿರಾ




