Virat Kohli : ವಿರಾಟ್ ಕೊಹ್ಲಿ ಖಾತೆ instagramನಲ್ಲಿ ಬರೋಬ್ಬರಿ 247 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕೊಹ್ಲಿ ಅಕೌಂಟ್ ಮಾಯವಾಗಿದ್ದು, ಫ್ಯಾನ್ಸ್ ಶಾಕ್ ಆಗಿದ್ದಾರೆ.

Virat Kohli : ಕೊಹ್ಲಿ ಅವರ ಇನ್ ಸ್ಟಾಗ್ರಾಮ್ ಅಕೌಂಟ್ ಶುಕ್ರವಾರ ಬೆಳಿಗ್ಗೆ ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ. 274 ಮಿಲಿಯನ್ಗಿಂತ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ @virat.kohli ಖಾತೆ ನಿಷ್ಕ್ರಿಯಗೊಂಡಂತೆ ಕಾಣಿಸಿಕೊಂಡಿದ್ದು, ಲಕ್ಷಾಂತರ ಅಭಿಮಾನಿಗಳು ಶಾಕ್ ಆಗಿದ್ದಾರೆ.
ವಿರಾಟ್ ಕೊಹ್ಲಿ ಇನ್ಸ್ಟಾ ನಾಪತ್ತೆ ಅಭಿಮಾನಿಗಳಲ್ಲಿ ಆತಂಕ
ಮುಂಜಾನೆ ಕೊಹ್ಲಿ ಖಾತೆಯನ್ನ ತೆರೆಯಲು ಪ್ರಯತ್ನಿಸಿದ ಬಳಕೆದಾರರಿಗೆ ಅವರ ಪೇಜ್ ಓಪನ್ ಆಗಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಕ್ಷಣಾರ್ಧದಲ್ಲೇ ಈ ವಿಷಯ ವೈರಲ್ ಆಗಿ, ಅಭಿಮಾನಿಗಳು ಚಿಂತೆಗೀಡಾಗಿದ್ರು.
ಬಳಿಕ ಅವರ ಇನ್ಸ್ಟಾಗ್ರಾಮ್ ಖಾತೆ ಪುನಃ ಸಕ್ರಿಯಗೊಂಡಿದ್ದು, ಆತಂಕಗೊಂಡ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧ 124 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ ಕೊಹ್ಲಿ, ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಮರಳಿ ಪಡೆದಿದ್ದರು. ಇಂತಹ ಉತ್ತಮ ಫಾರ್ಮ್ನ ನಡುವೆಯೇ ಅವರ ಇನ್ಸ್ಟಾಗ್ರಾಮ್ ಖಾತೆ ಕಣ್ಮರೆಯಾಗಿರುವುದು ಅಭಿಮಾನಿಗಳಿಗೆ ಇನ್ನಷ್ಟು ಗೊಂದಲ ಉಂಟುಮಾಡಿತು.
ಇದನ್ನೂ ಓದಿ : T-20 ಸರಣಿ ನಡುವೆ ಅಭಿಮಾನಿಗಳಿಗೆ ನಿವೃತ್ತಿ ಶಾಕ್ ಕೊಟ್ಟ K.L ರಾಹುಲ್.!

ಕೊಹ್ಲಿ ಇನ್ಸ್ಟಾ ಕೆಲವೇ ಗಂಟೆಗಳಲ್ಲಿ ಕಂಬ್ಯಾಕ್
ಇನ್ನು ಖಾತೆ ನಿಷ್ಕ್ರಿಯಗೊಂಡಿದ್ದ ಅವಧಿಯಲ್ಲಿ ಕೊಹ್ಲಿಯ ಎಕ್ಸ್ (ಹಿಂದಿನ ಟ್ವಿಟರ್) ಖಾತೆ ಮಾತ್ರ ಸಕ್ರಿಯವಾಗಿತ್ತು. ಆದರೆ ಈ ಬಗ್ಗೆ ವಿರಾಟ್ ಕೊಹ್ಲಿ ಯಾವುದೇ ಅಧಿಕೃತ ಸ್ಪಷ್ಟನೆ ನೀಡಲಿಲ್ಲ. ಆದರೆ ಅಭಿಮಾನಿಗಳು ಹ್ಯಾಕಿಂಗ್ನಿಂದ ಹಿಡಿದು ಸ್ವಯಂಪ್ರೇರಿತ ‘ಡಿಜಿಟಲ್ ಡಿಟಾಕ್ಸ್’ವರೆಗೆ ವಿವಿಧ ಊಹಾಪೋಹಗಳನ್ನು ಊಹಿಸಿಕೊಂಡಿದ್ದಾರೆ.
ಈ ಬಗ್ಗೆ ಮೆಟಾ ಅಥವಾ ಕೊಹ್ಲಿ ಅವರ ನಿರ್ವಹಣಾ ತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆಯಾಗದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯಿತು.

ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಏಷ್ಯಾದ ವ್ಯಕ್ತಿಯಾಗಿರುವ ವಿರಾಟ್ ಕೊಹ್ಲಿ, ಕೆಲವೇ ಗಂಟೆಗಳ ಕಾಲ ಆನ್ಲೈನ್ನಲ್ಲಿ ಕಾಣಿಸದಿದ್ದರೂ ಅದರ ಪರಿಣಾಮ ಎಷ್ಟೊಂದು ದೊಡ್ಡದಾಗಿರಬಹುದು ಎಂಬುದನ್ನು ಈ ಘಟನೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
MUST WATCH : ತುಮಕೂರಿನ ಯಲ್ಲಾಪುರ ಬಳಿ ಫುಲ್ ಟ್ರಾಫಿಕ್ ಜಾಮ್.. ಜಾಮ್




