Bidar ಜಿಲ್ಲೆಯ ಎನ್ಹೆಚ್-65ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಜಾತ್ರೆಗೆ ತೆರಳುತ್ತಿದ್ದ 30 ವರ್ಷದ ಯುವ ಉದ್ಯಮಿ ವಿಶ್ವಜೀತ್ ಸಾವನ್ನಪ್ಪಿದ್ದಾರೆ.

Bidar ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಎನ್ಹೆಚ್-65ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಜಾತ್ರೆಗೆ ತೆರಳುತ್ತಿದ್ದ ಯುವ ಉದ್ಯಮಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ಇಂದು ನಸುಕಿನ ಜಾವ ನಡೆದಿದೆ.
ವೀರಭದ್ರೇಶ್ವರ ಜಾತ್ರೆಗೆ ಹೊರಟಿದ್ದ ವೇಳೆ ಅವಘಡ
ಬಸವಕಲ್ಯಾಣದಿಂದ ಹುಮನಾಬಾದ್ನ ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಯುವ ಉದ್ಯಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : Hassan : ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

ಮೃತ ಯುವಕನ ವಿವರ
ಅಪಘಾತದಲ್ಲಿ ಮೃತಪಟ್ಟವರನ್ನು 30 ವರ್ಷದ ವಿಶ್ವಜೀತ್, ಬಸವಕಲ್ಯಾಣ ಪಟ್ಟಣದ ನಿವಾಸಿ ಎಂದು ಗುರುತಿಸಲಾಗಿದೆ. ವಿಶ್ವಜೀತ್ ಎರ್ಟಿಗಾ ಕಾರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಡೆಡ್ಲಿ ಆಕ್ಸಿಡೆಂಟ್ ಸಂಭವಿಸಿದೆ.
ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಗಂಭೀರ ಗಾಯಗೊಂಡ ವಿಶ್ವಜೀತ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯಿಂದ ಕುಟುಂಬ ಹಾಗೂ ಸ್ಥಳೀಯರಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಘಟನೆ ಸಂಬಂಧ ಬಸವಕಲ್ಯಾಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣ ತಿಳಿದುಕೊಳ್ಳಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನು ನೋಡಿ : TUMAKURU | ಜ.29, 30 ರಂದು ವಿಶಿಷ್ಟ ಲೈಂಗಿಕತೆ ಸಮುದಾಯದ ಸಮಾವೇಶಕ್ಕೆ ಸಿದ್ಧತೆ




