ಡಿಮ್ಹಾನ್ಸ್ ಸಂಸ್ಥೆಯಲ್ಲಿ ಮನೋವೈದ್ಯಶಾಸ್ತ್ರದ ಪಿಜಿ ವ್ಯಾಸಂಗ ಮಾಡುತ್ತಿದ್ದ ಡಾ ಯುವತಿ ಹಾಸ್ಟೆಲ್ನಲ್ಲಿ Suicide ಮಾಡಿಕೊಂಡಿದ್ದಾರೆ.

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) ಯಲ್ಲಿ ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ವಿದ್ಯಾರ್ಥಿನಿ ಡಾ. ಪ್ರಜ್ಞಾ ಪಾಲೇಗರ್ (24) ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡು Suicide ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಪೋಷಕರು ಹೋಗುತ್ತಿದ್ದಂತೆಯೇ ವಿಧಿವಶ
ಶಿವಮೊಗ್ಗ ಮೂಲದ ಪ್ರಜ್ಞಾ, ಪಿಜಿ ಅಧ್ಯಯನಕ್ಕಾಗಿ ಧಾರವಾಡಕ್ಕೆ ಎರಡು ವಾರಗಳ ಹಿಂದೆ ಆಗಮಿಸಿದ್ದಳು. ನಿನ್ನೆ ಆಕೆಯ ತಂದೆ-ತಾಯಿ ಭೇಟಿ ನೀಡಿ ಹೋಗಿದ್ದರೆಂದು ತಿಳಿದುಬಂದಿದೆ.
ಇದನ್ನು ಓದಿ : ಮೃತ IAS ಮಹಾಂತೇಶ್ ಪುತ್ರಿಗೆ ಯಾವ ಇಲಾಖೆಯಲ್ಲಿ ಕೆಲಸ? ಎಷ್ಟು ಸಂಬಳ?
ಫ್ಯಾನಿಗೆ ನೇಣು ಹಾಕಿಕೊಂಡು Suicide
ಡಾ. ಪ್ರಿಯಾ ಪಾಟೀಲ್ ಜೊತೆಗೆ ರೂಮ್ ಶೇರ್ ಮಾಡಿಕೊಂಡಿದ್ದ ಪ್ರಜ್ಞಾ, ಪೋಷಕರು ಬಂದಿದ್ದ ಕಾರಣ ಪ್ರಿಯಾ ಹೊರಗಡೆ ಉಳಿದುಕೊಂಡಿದ್ದರು. ಹೀಗಾಗಿ ರಾತ್ರಿ ಒಬ್ಬಳೇ ಇದ್ದ ಪ್ರಜ್ಞಾ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬೆಳಿಗ್ಗೆ ಪ್ರಿಯಾ ರೂಮಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ವಿಷಯ ತಿಳಿದ ತಕ್ಷಣ ಉಪನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಓದಿನ ಒತ್ತಡವೇ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದ್ದ ಯುವತಿ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ವೈದ್ಯಕೀಯ ಲೋಕದಲ್ಲಿ ವಿಷಾದ ಮೂಡಿಸಿದೆ.
ಇದನ್ನು ನೋಡಿ : ಅಕ್ರಮ ಮದ್ಯ ಮಾರಾಟ ದಂಧೆ ಯುವಕರೇ ಟಾರ್ಗೆಟ್ ಅಂತೆ




