1 ಲಕ್ಷ ಸಾಲಕ್ಕೆ 40 ಲಕ್ಷದ ಚೆಕ್ ಕೇಸ್- ಸೆಲ್ಫಿ ವೀಡಿಯೋ ಮಾಡಿ Suicide ಮಾಡಿಕೊಂಡ ವ್ಯಕ್ತಿ.

ಸಾಲಗಾರರ ನಿರಂತರ ಕಿರುಕುಳದಿಂದ ಬೇಸತ್ತು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೆಂಗಳೂರಿನ ನೆಲಮಂಗಲದ ನಿವಾಸಿ ಕೃಷ್ಣಪ್ಪ (47) Suicide ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಹಾಸನ ನಗರದಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಕೃಷ್ಣಪ್ಪ ವಾಸಿಸುತ್ತಿದ್ದರು.
ಇದನ್ನು ಓದಿ : ಪ್ಲಾಸ್ಟಿಕ್ ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿ ದರೋಡೆ
ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ Suicide
ಹಾಸನ ಹೊರವಲಯದ ದೊಡ್ಡಪುರ ಬಳಿ ಕೃಷ್ಣಪ್ಪ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಅತ್ಯಂತ ಗಂಭೀರ ಅಂಶವೆಂದರೆ, ಸಾವಿಗೆ ಮುನ್ನ ಅವರು ಸೆಲ್ಫಿ ವಿಡಿಯೋ ಮಾಡಿಕೊಂಡು ಅದನ್ನು ಪತ್ನಿ ಕಾಂಚನ ಅವರಿಗೆ ಕಳುಹಿಸಿದ್ದರು.
ಕಿರುಕುಳ ತಡೆಯಲು ಆಗುತ್ತಿಲ್ಲ
ವಿಡಿಯೋದಲ್ಲಿ ಕೃಷ್ಣಪ್ಪ ನಾನು ಪಡೆದ ಸಾಲ ಕೇವಲ 1 ಲಕ್ಷ ರೂಪಾಯಿ. ಆದರೆ ರಮೇಶ್ ಮತ್ತು ಮಂಜು 40 ಲಕ್ಷ ರೂಪಾಯಿ ಚೆಕ್ ಕೇಸ್ ಹಾಕಿದ್ದಾರೆ. ಜಾಮೀನು ಪಡೆಯಲು ಕೂಡ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಅವರ ಕಿರುಕುಳ ತಡೆಯಲು ಆಗುತ್ತಿಲ್ಲ. ನನ್ನ ಸಾವಿಗೆ ನೇರ ಕಾರಣ ಇವರೇ” ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.
ಈ ವಿಡಿಯೋ ಇದೀಗ ಪೊಲೀಸರ ಗಮನಕ್ಕೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ತನ್ನ ಹೆಂಡತಿಯನ್ನ 2 ನೇ ಮದುವೆಯಾಗಿದ್ಕೆ – ವ್ಯಕ್ತಿಯನ್ನ ಕೊಚ್ಚಿ ಕೊಚ್ಚಿ ಕೊಂದ ಗಂಡ




