Kolar ಜಿಲ್ಲೆಯಲ್ಲಿ ಅಕ್ರಮ ಸಂಬಂಧದ ಹಿನ್ನಲೆಯಲ್ಲಿ 41 ವರ್ಷದ ಯಲ್ಲೇಶ್ ಮೇಲೆ ಚಾಕು ಮತ್ತು ಕಲ್ಲಿನಿಂದ ಬರ್ಬರ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

Kolar : ಇತ್ತೀಚಿನ ದಿನಗಳಲ್ಲಿ ಅಕ್ರಮ ಸಂಬಂಧಗಳಿಂದ ಉಂಟಾಗುವ ಅಪರಾಧ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಅದೇ ಸರಣಿಯಲ್ಲಿ, ಕೋಲಾರ ಜಿಲ್ಲೆಯಲ್ಲಿ ನಡೆದ ಈ ಭೀಕರ ಕೊಲೆ ಪ್ರಕರಣ ಜನರಲ್ಲಿ ಬೆಚ್ಚಿಬೀಳುವಂತಿದೆ. ವಿವಾಹಿತ ಮಹಿಳೆಯ ಎರಡನೇ ಮದುವೆಯೇ ಈ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಮೃತ ವ್ಯಕ್ತಿ ಯಾರು?
ಫೋಟೋದಲ್ಲಿ ಕಾಣುವ ವ್ಯಕ್ತಿಯೇ ಬರ್ಬರವಾಗಿ ಹತ್ಯೆಗೊಳಗಾದ 41 ವರ್ಷದ ಯಲ್ಲೇಶ್. ಇವರು ಮೂಲತಃ ಕೋಲಾರ ತಾಲೂಕಿನ ಕೆಂದಟ್ಟಿ ಸಮೀಪದ ಮೆಟ್ಟುಬಂಡೆ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.
ಇದನ್ನು ಓದಿ : ನಾಳೆ ಸಾರಿಗೆ ನೌಕರರಿಂದ ಬೆಂಗಳೂರು ಚಲೋ
ಎರಡನೇ ಮದುವೆಯೇ ಕಾರಣವಾಯಿತೇ ಕೊಲೆಗೆ?
ಯಲ್ಲೇಶ್, ನರಸಾಪುರ ಗ್ರಾಮದಲ್ಲಿ ವಾಸವಿದ್ದ ರೇಣುಕಾ ಎಂಬ ವಿವಾಹಿತ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ ಎನ್ನಲಾಗಿದೆ. ಆದರೆ ರೇಣುಕಾಳ ಪತಿ ಸಂತೋಷ್ ಈಗಾಗಲೇ ಜೀವಂತವಾಗಿದ್ದು, ಈ ವಿಚಾರದಿಂದಾಗಿ ಇಬ್ಬರ ನಡುವೆ ವರ್ಷಗಳಿಂದ ವೈಷಮ್ಯ ಇತ್ತು ಎಂದು ಹೇಳಲಾಗುತ್ತಿದೆ.

ರೇಣುಕಾಳ ಪತಿ ಸಂತೋಷ್, ಯಲ್ಲೇಶ್ಗೆ ಕೊಲೆ ಬೆದರಿಕೆ ಹಾಕುತ್ತಿದ್ದನೆಂಬ ಆರೋಪವೂ ಕೇಳಿಬರುತ್ತಿದೆ.
ಘಟನೆ ನಡೆದ ದಿನ ಬೆಳಿಗ್ಗೆ, ಯಲ್ಲೇಶ್ ಡೈರಿಗೆ ಹಾಲು ಹಾಕಿ ಮನೆಗೆ ವಾಪಸ್ಸಾಗುತ್ತಿದ್ದಾಗ ಏಕಾಏಕಿ ಸಂತೋಷ್ ದಾಳಿ ನಡೆಸಿದ್ದಾನೆ. ಚಾಕುವಿನಿಂದ ಯಲ್ಲೇಶ್ಗೆ ಇರಿದು, ನಂತರ ಕಲ್ಲಿನಿಂದ ತಲೆ ಜಜ್ಜಿ ಅತೀ ಕ್ರೂರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ನಡೆಸಿ ಪರಾರಿಯಾಗಿರುವ ಆರೋಪಿ ಸಂತೋಷ್ನ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದನ್ನು ನೋಡಿ : ಮದ್ವೆ ಆಗಿದ್ರು ಆಕೆಗೆ ಅವನೇ ಬೇಕಂತೆ- ಎರಡೇ ತಿಂಗಳಿಗೆ ಎಸ್ಕೇಪ್ ಆದ್ಳು ಹೆಂಡ್ತಿ..!




