Haveri ಯಲ್ಲಿ 2 ಬೈಕ್ ಗಳ ನಡುವೆ ಭೀಕರ Accident, ಮೂವರಿಗೆ ಗಂಭೀರ ಗಾಯ.

ಇಬ್ಬರು ಬೈಕ್ ಸವಾರರ ನಡುವೆ ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೊರವಲಯದ ಕಲಗುದರಿ ಟೋಲ್ ಪ್ಲಾಜ್ ಹತ್ತಿರ ನಡೆದಿದೆ.
ಮಹಿಳೆ ಸೇರಿ ಮೂವರಿಗೆ ಗಂಭೀರ ಗಾಯ
ಇನ್ನು Accident ನಲ್ಲಿ ಗಾಯಗೊಂಡರವರನ್ನು ಶಿಗ್ಗಾವಿ ತಾಲೂಕಿನ ಮುಳಕೇರಿ ಗ್ರಾಮದ ಸೈಯದ್ ಬಾಷಾ ಮದರಸಾಬ್ ದುಂಡಶಿ, ಹಾಗೂ ಸೊರಬ ತಾಲೂಕು ಮೂಗೂರು ಗ್ರಾಮದ ರಜನಿಕಾಂತ ಶಿವಪ್ಪ ಕುರುಬರ್ ಎನ್ನಲಾಗಿದೆ.

ಇದನ್ನು ಓದಿ : ಗಂಡನ ಅನುಮಾನದ ಭೂತಕ್ಕೆ ಬಲಿಯಾದ ಹೆಂಡ್ತಿ
ಇವರಿಬ್ಬರು ಬೈಕ್ ನಡುವೆ ಹಾನಗಲ್ ಹೊರವಲಯದ ಉಪ್ಪಿನ್ ಪೆಟ್ರೋಲ್ ಪಂಪ್ ಹತ್ತಿರ ಇರುವ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾದಲ್ಲಿ ಮಹಿಳೆ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.
Accident – ಪ್ರಕರಣ ದಾಖಲು
ಇನ್ನು ಅಪಘಾತ ನಡೆದ ತಕ್ಷಣ ಸ್ಥಳೀಯ ಸಹಾಯದಿಂದ ಗಂಭೀರವಾಗಿ ಗಾಯಗೊಂಡ ವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಈ ಘಟನೆ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

ಇದನ್ನು ನೋಡಿ : ILLIGAL SAND MAFIA | ಚನ್ನೇನಹಳ್ಳಿಯಲ್ಲಿ ಅಕ್ರಮ ಮಣ್ಣು ಮಾಫಿಯಾ




