Raichur ಲಿಂಗಸೂಗೂರು ತಾಲ್ಲೂಕಿನ ಜಕ್ಕೇರುಮಡು ತಾಂಡದಲ್ಲಿ ಮಗ ಕುಮಾರ ತಾಯಿಯನ್ನು ಕಲ್ಲಿನಿಂದ ಹೊಡೆದು ಕೊಂದು ಪರಾರಿಯಾಗಿರುವ ಘಟನೆ ನಡೆದಿದೆ.

ಆಸ್ತಿಗಾಗಿ ನಡೆದ ಕೌಟುಂಬಿಕ ಕಲಹದ ಹಿನ್ನೆಲೆ ಹೆತ್ತ ತಾಯಿಯನ್ನೇ ಮಗ ಕಲ್ಲಿನಿಂದ ಹೊಡೆದು ಕೊಂದಿರುವ ಹೃದಯವಿದ್ರಾವಕ ಘಟನೆ Raichur ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಜಕ್ಕೇರುಮಡು ತಾಂಡದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಚಂದವ್ವ (55) ಎಂದು ಗುರುತಿಸಲಾಗಿದೆ. ಆರೋಪಿ ಆಕೆಯ ಸ್ವಂತ ಮಗ ಕುಮಾರ.
ಕೊಲೆ ನಡೆದ ಹಿನ್ನೆಲೆ
ಆರೋಪಿ ಕುಮಾರ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಗ್ರಾಮಕ್ಕೆ ಬಂದಿದ್ದ ಆತ, ಪಿತ್ರಾರ್ಜಿತ ಮೂರು ಎಕರೆ ಜಮೀನನ್ನು ಅಣ್ಣತಮ್ಮಂದಿರ ನಡುವೆ ಹಂಚಿಕೆ ಮಾಡಬೇಕು ಎಂದು ತಾಯಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ.
ಆದರೆ ತಾಯಿ ಆಸ್ತಿ ಭಾಗಮಾಡಲು ಒಪ್ಪದೆ ಇದ್ದುದರಿಂದ ಮಾತಿನ ಚಕಮಕಿ ತೀವ್ರವಾಗಿ ಗಲಾಟೆಯಾಗಿ ಮಾರ್ಪಟ್ಟಿದೆ.

ಇದನ್ನು ಓದಿ : Bengaluru ನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ suicide..!
ಮದ್ಯದ ನಶೆಯಲ್ಲಿದ್ದ ಕುಮಾರ, ಕೋಪದ ಮಿತಿಮೀರಿದ ಸ್ಥಿತಿಯಲ್ಲಿ ತಾಯಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹಲ್ಲೆ ನಡೆಸಿದ್ದು, ಚಂದವ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪೊಲೀಸ್ ಕ್ರಮ
ಈ ಘಟನೆ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ತಾಯಿಯನ್ನೇ ಕೊಂದಿರುವ ಈ ಘಟನೆ ಗ್ರಾಮದಲ್ಲಿ ಭಾರೀ ಆಘಾತ ಮತ್ತು ಆತಂಕಕ್ಕೆ ಕಾರಣವಾಗಿದ್ದು, ಕುಟುಂಬ ಕಲಹಗಳು ಎಷ್ಟರ ಮಟ್ಟಿಗೆ ಭೀಕರ ಅಂತ್ಯಕ್ಕೆ ತಲುಪುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಇದನ್ನು ನೋಡಿ : ಕರ್ನಾಟಕ- ಕೇರಳ ಗಡಿಯಲ್ಲಿ ರಾಜೀವ್ ಗೌಡ ಬಂಧನ : ಪೌರಾಯುಕ್ತೆ ಅಮೃತಾಗೌಡಗೆ ಬೆದರಿಕೆ ಹಾಕಿದ್ದ ರಾಜೀವ್ ಗೌಡ ಆರೆಸ್ಟ್




