Chikkamagaluru ಜಿಲ್ಲೆಯ ಆಲ್ದೂರು ಬಳಿ ಸಂಭವಿಸಿದ ಹಿಟ್ & ರನ್ ಅಪಘಾತದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

Chikkamagaluru : ಅಪಘಾತದ ಬಳಿಕ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ. ಮೃತಪಟ್ಟವರನ್ನು ನವಮಿ (26) ಎಂದು ಗುರುತಿಸಲಾಗಿದೆ. ಅವರು ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಪಘಾತದ ಹಿನ್ನೆಲೆ
ಪ್ರವಾಸಿ ವಾಹನವು ನವಮಿಗೆ ಡಿಕ್ಕಿ ಹೊಡೆದು, ಯಾವುದೇ ಸಹಾಯ ಮಾಡದೇ ಸ್ಥಳದಿಂದ ಚಾಲಕ ಪರಾರಿಯಾಗಿದ್ದಾನೆ. ಈ ಘಟನೆ ಹಿಟ್ & ರನ್ ಪ್ರಕರಣವಾಗಿ ದಾಖಲಾಗಿದೆ.
ಇದನ್ನು ಓದಿ : ಮಹಿಳೆಗೆ ಲೈಂಗಿಕ ಕಿರಕುಳ – Dhurandhar ಕಲಾವಿದನ ಬಂಧನ
ತುಮಕೂರು ಜಿಲ್ಲೆಯ ವಾಹನ ಶಂಕೆ
ಅಪಘಾತಕ್ಕೆ ಕಾರಣವಾದ ಪ್ರವಾಸಿ ವಾಹನ ತುಮಕೂರು ಜಿಲ್ಲೆಯ ತಿಪಟೂರು ಮೂಲದದ್ದೆಂದು ತಿಳಿದುಬಂದಿದೆ. ಪೊಲೀಸರು ವಾಹನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ತುಮಕೂರು ಗ್ರಾಮಾಂತರದಲ್ಲಿ ದಳಪತಿಗೆ ಭರ್ಜರಿ ರೆಸ್ಪಾನ್ಸ್




