400 ಕೋಟಿ ರಾಬರಿ ಕೇಸ್ ನಲ್ಲಿ, ಬಿಜೆಪಿ ಕಾಂಗ್ರೆಸ್ ಅಂತ ಏನಿಲ್ಲ ಎಲ್ಲರೂ ಇದ್ದಾರೆ : ಸಚಿವ Satish Jarkiholi.

ಬೆಳಗಾವಿ ಗಡಿಯಲ್ಲಿ 400 ಕೋಟಿ ರಾಬರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು 400 ಕೋಟಿ ಪ್ರಕರಣದಲ್ಲಿ ಕಾಂಗ್ರೆಸ್ ಬಿಜೆಪಿ ಅಂತ ಏನಿಲ್ಲ ಎಲ್ಲರೂ ಇರುತ್ತಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ತಕ್ಷಣ ತನಿಖೆ ನಡೆಸುತ್ತೇವೆ
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಪೊಲೀಸರು ನಮ್ಮ ಪೊಲೀಸರಿಗೆ ಸಹಕರಿಸುತ್ತಿಲ್ಲ. ಪ್ರಕರಣ ಸಂಬಂಧಪಟ್ಟಂತೆ ಈಗಾಗಲೇ ಪತ್ರ ಬರೆದಿದ್ದಾರೆ. “ಯಾರಾದರೂ ದೂರು ನೀಡಿದರೆ ನಮ್ಮ ಪೊಲೀಸ್ ಇಲಾಖೆಯವರು ತನಿಖೆ ನಡೆಸುತ್ತಾರೆ. ಚೋರ್ಲಘಾಟ್ ಪ್ರದೇಶದ ವ್ಯಾಪ್ತಿ ದೊಡ್ಡದಾಗಿದ್ದು, ದರೋಡೆ ನಡೆದ ಸ್ಥಳ ಮಹಾರಾಷ್ಟ್ರ, ಗೋವಾ ಅಥವಾ ಕರ್ನಾಟಕದಲ್ಲಿಯೇ ಇದೆ ಎಂಬ ಗೊಂದಲವಿದೆ. ನಾವು ತಕ್ಷಣ ತನಿಖೆ ನಡೆಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ : ಮಹಿಳೆಗೆ ಲೈಂಗಿಕ ಕಿರಕುಳ – Dhurandhar ಕಲಾವಿದನ ಬಂಧನ

ರಾಬರಿ ಕೇಸ್ ನಲ್ಲಿ, ಬಿಜೆಪಿ ಕಾಂಗ್ರೆಸ್ ಅಂತ ಏನಿಲ್ಲ ಎಲ್ಲರೂ ಇದ್ದಾರೆ
400 ಕೋಟಿ ಹಣ ಕಾಂಗ್ರೆಸ್ಗೆ ಸೇರಿದ್ದು ಎಂಬ ಆರೋಪದ ವಿಚಾರವಾಗಿ ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಇದರಲ್ಲಿ ಕಾಂಗ್ರೆಸ್ ಬಿಜೆಪಿ ಅಂತ ಏನು ಇಲ್ಲ ಎಲ್ಲರೂ ಇರುತ್ತಾರೆ.
ದರೋಡೆ ಪ್ರಕರಣದಲ್ಲಿ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ನಮ್ಮ ಪೊಲೀಸರು ಮಹಾರಾಷ್ಟ್ರ ಪೊಲೀಸ್ರಿಗೆ ಸಹಕಾರ ನೀಡಿದ್ದಾರೆ. ಮಹಾರಾಷ್ಟ್ರ ತನಿಖೆಗೆ ನಮ್ಮ ಪೊಲೀಸರು ಸಹಕಾರ ನೀಡುತ್ತಾರೆ ಎಂದು ಸಚಿವ Satish Jarkiholi ಹೇಳಿಕೆ ನೀಡಿದರು.

ಇದನ್ನು ನೋಡಿ : ತುಮಕೂರು ಗ್ರಾಮಾಂತರದಲ್ಲಿ ದಳಪತಿಗೆ ಭರ್ಜರಿ ರೆಸ್ಪಾನ್ಸ್




