Bengaluru ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣದಲ್ಲಿ ತನಿಖೆ ವೇಳೆ ಆರೋಪಿಯ ಲೈಂಗಿಕ ವಿಕೃತಿ, ಅತ್ಯಾಚಾರ ಯತ್ನ ಮತ್ತು ಕೊಲೆಯ ಭೀಕರ ಸತ್ಯಗಳು ಬಹಿರಂಗವಾಗಿವೆ.

Bengaluru ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ದಿನೇದಿನೇ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ವಿಚಾರಣೆಯ ವೇಳೆ ಆರೋಪಿ ಕರ್ನಲ್ ಕುರೈ ಪೊಲೀಸರ ಮುಂದೆ ಆತಂಕಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ.
ಪ್ರೀತಿಯಲ್ಲ, ವಿಕೃತ ಮನಸ್ಥಿತಿ
ಪೊಲೀಸ್ ತನಿಖೆಯಲ್ಲಿ ತಿಳಿದುಬಂದಂತೆ, ಆರೋಪಿಗೆ ಶರ್ಮಿಳಾಳ ಮೇಲಿದ್ದದ್ದು ಪ್ರೀತಿ ಅಲ್ಲ, ಲೈಂಗಿಕ ವಿಕೃತಿ. ಶರ್ಮಿಳಾಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದೆನೆ ಎಂದು ಆರೋಪಿ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಇದನ್ನು ಓದಿ : ಮಹಿಳೆಗೆ ಲೈಂಗಿಕ ಕಿರಕುಳ – Dhurandhar ಕಲಾವಿದನ ಬಂಧನ
ಕೊಲೆಯ ದಿನ ಶರ್ಮಿಳಾ ಜೋರಾಗಿ ಕೂಗುತ್ತಿದ್ದಂತೆ, ಆರೋಪಿ ಆಕೆಯ ಬಾಯಿಯನ್ನು ಮುಚ್ಚಿ ಕುತ್ತಿಗೆಯನ್ನು ಒತ್ತಿದ್ದಾನೆ. “ನನ್ನನ್ನು ಬಿಟ್ಟುಬಿಡು” ಎಂದು ಶರ್ಮಿಳಾ ಬೇಡಿಕೊಂಡರೂ, ಆರೋಪಿ ನಿರ್ದಯವಾಗಿ ಹಲ್ಲೆ ನಡೆಸಿದ್ದು, ಉಸಿರುಗಟ್ಟಿ ಶರ್ಮಿಳಾ ಮೃತಪಟ್ಟಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಸಾಕ್ಷ್ಯ ನಾಶಕ್ಕೆ ಬೆಂಕಿ
ಕೊಲೆಯ ಬಳಿಕ ಆರೋಪಿಯು ಘಟನೆ ಆಕಸ್ಮಿಕವೆಂದು ಬಿಂಬಿಸಲು ಯತ್ನಿಸಿದ್ದಾನೆ. ಹಾಸಿಗೆಯ ಮೇಲೆ ಟಿಶ್ಯೂ ಪೇಪರ್ ಇಟ್ಟು ಬೆಂಕಿ ಹಚ್ಚಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ತನಿಖೆ ಮುಂದುವರಿದಂತೆ ಮತ್ತಷ್ಟು ಭೀಕರ ಸತ್ಯಗಳು ಬಹಿರಂಗವಾಗುತ್ತಿವೆ. ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದೆ.
ಇದನ್ನು ನೋಡಿ : ತುಮಕೂರು ಗ್ರಾಮಾಂತರದಲ್ಲಿ ದಳಪತಿಗೆ ಭರ್ಜರಿ ರೆಸ್ಪಾನ್ಸ್




