ಕಿರುತೆರೆ ಕಲಾವಿದ Gilli ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರಿಂದ ಅಪೂರ್ವ ಬೆಂಬಲ. ಬಿಗ್ ಬಾಸ್ ಗಿಲ್ಲಿ ಗೆಲುವಿಗೆ ರಾಜ್ಯ ನಾಯಕರ ಅಭಿನಂದನೆ..

ಕಿರುತೆರೆ ಕಲಾವಿದ Gilli ಅವರಿಗೆ ರಾಜ್ಯದ ಪ್ರಮುಖ ರಾಜಕೀಯ ನಾಯಕರಿಂದ ಅಪೂರ್ವ ಬೆಂಬಲ ವ್ಯಕ್ತವಾಗಿದೆ.
ಸಾಮಾನ್ಯವಾಗಿ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರ ಸಿಗುವಂತಹ ಈ ರಾಜಕೀಯ ಪ್ರೋತ್ಸಾಹ, ಕಿರುತೆರೆ ಕಲಾವಿದರಾದ ಗಿಲ್ಲಿಗೆ ಸಿಕ್ಕಿರುವುದು ವಿಶೇಷವಾಗಿದ್ದು, ಅವರ ಗೆಲುವಿನ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
CM, DCM ಸೇರಿ ಹಲವರಿಂದ ಅಭಿನಂದನೆ
ಗಿಲ್ಲಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಗೃಹ ಸಚಿವ ಪರಮೇಶ್ವರ್, ಸೇರಿದಂತೆ ಹಲವು ರಾಜಕೀಯ ನಾಯಕರು ಭೇಟಿ ಮಾಡಿ ಅಥವಾ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ.
ಇದು ಗಿಲ್ಲಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಬಿಗ್ ಬಾಸ್ಗೆ ಮತ ಹಾಕುವಂತೆ ಕೋರಿದ ರಾಜಕೀಯ ನಾಯಕರು
ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರು ಗಿಲ್ಲಿ ಗೆಲ್ಲಬೇಕು ಎಂದು ಬಹಿರಂಗವಾಗಿ ಆಶಿಸಿದ್ದರು. ಬಿಗ್ ಬಾಸ್ ಸ್ಪರ್ಧೆಯಲ್ಲಿ ಗಿಲ್ಲಿಗೆ ಮತ ಹಾಕುವಂತೆ ಕೋರಿದ್ದೂ ವಿಶೇಷ.
ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಅವರು ಗಿಲ್ಲಿಗೆ ಕರೆ ಮಾಡಿ ಶುಭ ಹಾರೈಸಿದ್ದು, ಗಿಲ್ಲಿಯ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.
ಸಿದ್ದರಾಮಯ್ಯ ಕುಟುಂಬದ ಫೇವರಿಟ್ ಗಿಲ್ಲಿ
ಗಿಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಗಿಲ್ಲಿಯ ಆಟವನ್ನು ಸಿಎಂ ಪ್ರಶಂಸಿಸಿದ್ದು, ಅವರ ಕುಟುಂಬಕ್ಕೂ ಗಿಲ್ಲಿ ಫೇವರಿಟ್ ಎನ್ನಲಾಗಿದೆ.
ಇದು ಗಿಲ್ಲಿಗೆ ಸಿಕ್ಕ ದೊಡ್ಡ ಗೌರವವಾಗಿದೆ.
ಇದನ್ನು ಓದಿ : Yadagiri : ಶಿಕ್ಷಕರು ಬೈದಿದ್ದಕ್ಕೆ ಬೇಸತ್ತು ವಿದ್ಯಾರ್ಥಿ ದುರಂತ ಅಂತ್ಯ?

ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಯಿಂದ ಶುಭಾಶಯ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೂರವಾಣಿ ಮೂಲಕ, “ಚೆನ್ನಾಗಿ ಆಡಿದ್ದೀಯಾ, ಒಳ್ಳೆಯದಾಗಲಿ”
ಎಂದು ಹಾರೈಸಿದ್ದಾರೆ.
ಇನ್ನೊಂದೆಡೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, “ಹಳ್ಳಿ ಸೊಗಡಿನ ಹುಡುಗರು ಬೆಳೆಯುತ್ತಿರುವುದು ಖುಷಿ ತಂದಿದೆ”
ಎಂದು ಹೇಳಿ ಗಿಲ್ಲಿಗೆ ಶುಭ ಕೋರಿದ್ದಾರೆ. ಗಿಲ್ಲಿ ಗೆದ್ದಾಗ ಟ್ವೀಟ್ ಕೂಡ ಮಾಡಿದ್ದರು.
ಇನ್ನಿತರ ನಾಯಕರಿಂದಲೂ ಬೆಂಬಲ
ಸಿಪಿ ಯೋಗೇಶ್ವರ್, ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಗಿಲ್ಲಿಗೆ ಶುಭಾಶಯ ಕೋರಿದ್ದಾರೆ.
ಇತ್ತೀಚೆಗೆ ಗೃಹ ಸಚಿವ ಪರಮೇಶ್ವರ್ ಅವರನ್ನು ಗಿಲ್ಲಿ ಭೇಟಿ ಮಾಡಿದ್ದಾರೆ, ಅವರು ಕೂಡ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ನೋಡಿ : ಮನರೇಗಾ ಯೋಜನೆ ಬದಲಾವಣೆ ವಿರೋಧಿಸಿ ತಮಿಳುನಾಡು ಅಸೆಂಬ್ಲಿಯಲ್ಲಿ ನಿರ್ಣಯ ಅಂಗೀಕಾರ




