Bengaluru : ಶನಿವಾರದಿಂದ ಸತತ ಮೂರು ದಿನಗಳ ರಜೆ ಇರುವ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಹೆಚ್ಚುವರಿ ಬಸ್ಗಳ ನಿಯೋಜನೆ ಮಾಡಿದೆ.

Bengaluru : ಜ.24ರಂದು ನಾಲ್ಕನೇ ಶನಿವಾರ, ಜ.25ರಂದು ಭಾನುವಾರ ಮತ್ತು ಜ.26ರಂದು ಗಣರಾಜ್ಯೋತ್ಸವ ಇರುವುದರಿಂದ ರಾಜ್ಯದಾದ್ಯಂತ ನಿರಂತರ ಮೂರು ದಿನಗಳ ರಜೆ ದೊರೆಯಲಿದೆ. ಈ ಕಾರಣದಿಂದ ಬೆಂಗಳೂರು ನಗರದಿಂದ ಹೊರ ಜಿಲ್ಲೆಗಳತ್ತ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.
ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ, ಕೆಎಸ್ಆರ್ಟಿಸಿ ಬಸ್ಗಳ ಜೊತೆಗೆ ಬಿಎಂಟಿಸಿ ಬಸ್ಗಳೂ ಸಹ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಚಾರ ನಡೆಸಲಿವೆ. ಇದರಿಂದ ಪ್ರಯಾಣ ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ : Belagavi : ಮಕ್ಕಳಾಗಿಲ್ಲವೆಂದು ಕಾಟ ಕೊಟ್ಟ ಪತ್ನಿಯ ಹತ್ಯೆಗೈದ ಪಾಪಿಪತಿ.!
ಬಸ್ಗಳ ಸಂಖ್ಯೆಯಲ್ಲಿ ಹೆಚ್ಚಳ
ಇಂದು ಸುಮಾರು 265 ಬಿಎಂಟಿಸಿ ಬಸ್ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ. ನಾಳೆ ಪ್ರಯಾಣಿಕರ ಒತ್ತಡ ಹೆಚ್ಚಾಗುವ ಸಾಧ್ಯತೆ ಇದ್ದು, 500ಕ್ಕೂ ಹೆಚ್ಚು ಬಿಎಂಟಿಸಿ ಬಸ್ಗಳನ್ನು ರಸ್ತೆಗಿಳಿಸಲು ಯೋಜನೆ ರೂಪಿಸಲಾಗಿದೆ.

ಪ್ರಯಾಣಿಕರಿಗೆ BMTC ಸಲಹೆ..
ಮುಂಚಿತವಾಗಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸುವಂತೆ ಹಾಗೂ ಅಧಿಕೃತ ಮಾಹಿತಿಗಾಗಿ ಬಿಎಂಟಿಸಿ ಪ್ರಕಟಣೆಗಳನ್ನು ಗಮನಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ.
ಇದನ್ನು ನೋಡಿ : ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ ಕರ್ನಾಟಕ-ಕೇರಳ ಸರ್ಕಾರ!




