ರಾಜ್ಯಪಾಲರ ಕಚೇರಿಗೆ Bomb Threat ; ಆರ್ ಡಿಎಕ್ಸ್ ಬ್ಲಾಸ್ಟ್ ಮಾಡ್ತೇವೆಂದು ಇಮೇಲ್!

ರಾಜ್ಯಪಾಲರ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಬರೆದಿದ್ದ ಇಮೇಲ್ ಒಂದು ರಾಜ್ಯಪಾಲರ ಕಚೇರಿಗೆ ಬಂದಿದೆ ಎಂದು ತಿಳಿದು ಬಂದಿದೆ
ಮಧ್ಯಾಹ್ನ ಬಾಂಬ್ ಬ್ಲಾಸ್ಟ್ ಆಗುತ್ತೆ
ಇನ್ನು ಇದೇ ತಿಂಗಳ 14 ರಂದು ಸಹ ಹೀಗೆಯೇ ಒಂದು Bomb Threat ಇಮೇಲ್ ಬಂದಿದೆ, ಆದರೆ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಇಮೇಲ್ನಲ್ಲಿ ಬರೆಯಲಾಗಿದೆ. ಐಇಡಿ ಬಾಂಬ್ ಇಟ್ಟು, ಇಬ್ಬರು ಟ್ರಿಗರ್ ಇಟ್ಟುಕೊಂಡಿದ್ದಾರೆ ಎಂದು ಬರೆದಿದ್ದು ಇಮೇಲ್ ನಿಂದ ಈ ಸಂದೇಶ ಕಳುಹಿಸಲಾಗಿದೆ.
ಇದನ್ನು ಓದಿ : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ High Court ಗ್ರೀನ್ ಸಿಗ್ನಲ್

ಪೊಲೀಸರಿಂದ ತಪಾಸಣೆ
ಇನ್ನು ಕಚೇರಿ ಸಿಬ್ಬಂದಿ ತಕ್ಷಣ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿ ದರು. ಈ ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ.
Bomb Threat – ಪ್ರಕರಣ ದಾಖಲು
ಈ ಪ್ರಕರಣ ಸಂಬಂಧ, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿಪ್ರಕರಣ ದಾಖಲಾಗಿದ್ದು, ಪೊಲೀಸರು ಬೆದರಿಕೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಮೈಸೂರಿನ ‘ಮೈಲಾರಿ’ ಘಮ; ಹೋಟೆಲ್ ಉದ್ಘಾಟಿಸಿ, ದೋಸೆ ಸವಿದು ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ




