Bangalore : ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಮದುವೆಯ ಹೆಸರಿನಲ್ಲಿ ಯುವತಿಯರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನ ಭಯಾನಕ ಕರ್ಮಕಾಂಡ ಬಯಲಾಗಿದ್ದು, ಇದೀಗ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Bangalore : ಆರೋಪಿ ವಿಜಯ್ ರಾಜ್ ಗೌಡ ತನ್ನನ್ನು ದೊಡ್ಡ ಉದ್ಯಮಿ ಎಂದು ಪರಿಚಯಿಸಿಕೊಂಡು, ಪತ್ನಿಯನ್ನೇ ಅಕ್ಕ ಎಂದು ಹೇಳಿಕೊಂಡು ಯುವತಿಯರನ್ನು ನಂಬಿಸುತ್ತಿದ್ದ.
ಮ್ಯಾಟ್ರಿಮೋನಿ ತಾಣದಲ್ಲಿ ಪರಿಚಯವಾದ ಯುವತಿಯರಿಗೆ ಮದುವೆ ಭರವಸೆ ನೀಡಿ ಹಣ ಪಡೆದು ಬಳಿಕ ಪರಾರಿಯಾಗುತ್ತಿದ್ದ ಎನ್ನಲಾಗಿದೆ.
ED ಕೇಸ್’ ಹೆಸರಿನಲ್ಲಿ ನಕಲಿ ದಾಖಲೆ ತೋರಿಸಿ ಹಣ ವಸೂಲಿ
ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ಬಳಿಕ, ನನ್ನ ಬ್ಯಾಂಕ್ ಖಾತೆಯಲ್ಲಿರುವ ಲಕ್ಷಾಂತರ ಹಣ ED ಕೇಸ್ನಿಂದ ಫ್ರೀಜ್ ಆಗಿದೆ”
ಎಂದು ಹೇಳುತ್ತಿದ್ದ. ಹಣ ಬಿಡುಗಡೆಗೆ ತುರ್ತು ಅಗತ್ಯವಿದೆ ಎಂದು ನಕಲಿ ಕೋರ್ಟ್ ಆದೇಶಗಳು,
ದಾಖಲೆಗಳನ್ನು ತೋರಿಸಿ 10 ಲಕ್ಷ, 13 ಲಕ್ಷ, 30 ಲಕ್ಷ ರೂ.ವರೆಗೆ ಹಣ ಪಡೆದುಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗುತ್ತಿದ್ದ.
ಒಂದೇ ಪ್ರಕರಣವಲ್ಲ, ಹಲವು ಜಿಲ್ಲೆಗಳಲ್ಲಿ ಕೇಸ್ ದಾಖಲು
ಪೊಲೀಸರ ತನಿಖೆಯಲ್ಲಿ ಈ ವಂಚನೆ ಇದೇ ಮೊದಲಲ್ಲ ಎಂಬುದು ಗೊತ್ತಾಗಿದೆ. 2019 ರಿಂದ 2026 ರವರೆಗೆ ವಿವಿಧ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ: 2019 – ಕುಣಿಗಲ್ 2022 – ಅತ್ತಿಬೆಲೆ 2023 – ಶಿವಮೊಗ್ಗ 2025 – ಬೆಂಗಳೂರು 2026 – ಕಾಡುಗೋಡಿ ಠಾಣೆ
ಮಾಜಿ ಸಂಸದ ಡಿಕೆ ಸುರೇಶ್ ಹೆಸರಿನ ದುರ್ಬಳಕೆ ಆರೋಪ
ಕುಣಿಗಲ್ನಲ್ಲಿ ಟೆಂಡರ್ ಡೀಲ್ ನೀಡಿಸುವುದಾಗಿ ಹೇಳಿ, “ಮಾಜಿ ಸಂಸದ ಡಿಕೆ ಸುರೇಶ್ ನನ್ನ ಆಪ್ತರು”
ಎಂದು ಹೆಸರು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ದಾಖಲಾಗಿದೆ.
ಟಾಟಾ ಪವರ್ ಡಿಡಿಎಲ್ ಕಂಪನಿಗೆ ವಾಹನ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ನಕಲಿ ಸಹಿ, ಸೀಲ್ ಬಳಸಿ ವಂಚನೆ ಮಾಡಿದ್ದಾನೆ ಎನ್ನಲಾಗಿದೆ.
1.53 ಕೋಟಿ ರೂ.ವರೆಗೆ ಹಣ ವಂಚನೆ
ಕೆಂಗೇರಿಯಲ್ಲಿ ಸಿಮೆಂಟ್ ಫ್ಯಾಕ್ಟರಿ ಮಾರಾಟ ಮಾಡುವುದಾಗಿ ನಂಬಿಸಿ ಯುವತಿಯೋರ್ವರಿಂದ 1.53 ಕೋಟಿ ರೂ. ಪಡೆದುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತಂದೆಯನ್ನು ನಿವೃತ್ತ ತಹಶೀಲ್ದಾರ್, ತಾಯಿಯನ್ನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ಈ ಆರೋಪಿ, ತನ್ನ ಕುಟುಂಬದ ಸಹಕಾರದಿಂದಲೇ ವಂಚನೆ ನಡೆಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು ನೀಡಿದ ಮಹತ್ವದ ಮನವಿ
ಆರೋಪಿಯ ವಿರುದ್ಧ ಶಿವಮೊಗ್ಗ, ಆನೇಕಲ್, ಅತ್ತಿಬೆಲೆ, ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇನ್ನೂ ಹೆಚ್ಚಿನ ಪ್ರಕರಣಗಳು ಹೊರಬರುವ ಸಾಧ್ಯತೆ ಇದ್ದು, ವಂಚನೆಗೊಳಗಾದವರು ಮುಂದೆ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.




