Ugram Manju ಅವರು ಇಂದು ಸಾಯಿ ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ಖಳನಟ ಉಗ್ರಂ ಮಂಜು ಅವರು ಇಂದು ಸಾಯಿ ಸಂಧ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಹಿರಿಯರ ಆಶೀರ್ವಾದದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಂಧುಮಿತ್ರರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ
ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಬಂಧುಮಿತ್ರರು ಭಾಗವಹಿಸಿದ್ದರು. ಹಿತೈಷಿಗಳು ನವಜೋಡಿಗೆ ಶುಭ ಹಾರೈಸಿ ಆಶೀರ್ವದಿಸಿದರು. ಮದುವೆಗೆ ಎರಡು ದಿನಗಳ ಮುಂಚೆಯೇ ಉಗ್ರಂ ಮಂಜು ಅವರ ನಿವಾಸದಲ್ಲಿ ಹಳದಿ ಶಾಸ್ತ್ರದ ಸಂಭ್ರಮ ವಿಜೃಂಭಣೆಯಿಂದ ನಡೆದಿತ್ತು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅರಿಶಿಣ ಶಾಸ್ತ್ರ ನೆರವೇರಿತು.
ಇದನ್ನು ಓದಿ : Belagavi : ಮಕ್ಕಳಾಗಿಲ್ಲವೆಂದು ಕಾಟ ಕೊಟ್ಟ ಪತ್ನಿಯ ಹತ್ಯೆಗೈದ ಪಾಪಿಪತಿ.!

ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಗ ಅಭಿನಯ
ಮಂಜುನಾಥ್ ಗೌಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ Ugram manju ಎಂದೇ ಖ್ಯಾತಿ ಪಡೆದಿದ್ದಾರೆ. ಕೋಲಾರದ ಉಗ್ರಂ ಮಂಜು ಅವರು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ ಉಗ್ರಂ ಮೂವಿಯಲ್ಲಿ ಖಳ ನಟನಾಗಿ ಅಮೋಘವಾಗಿ ಅಭಿನಯ ಮಾಡಿದ್ದರು. ಈ ಸಿನಿಮಾದಿಂದಲೇ ಇವರಿಗೆ ಉಗ್ರಂ ಎನ್ನುವುದು ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.
Transplant Coordinator
ಉಗ್ರಂ ಮಂಜು ಅವರು ಮದುವೆಯಾದ ಹುಡುಗಿ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಅವರ ಧರ್ಮಪತ್ನಿ ಸಾಯಿ ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯ ಆಡ್ಮಿನ್ ಡಿಪಾರ್ಟ್ಮೆಂಟ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿ : ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ ಕರ್ನಾಟಕ-ಕೇರಳ ಸರ್ಕಾರ!




