ಗಿಲ್ಲಿ ನಟನನ್ನು ಅಭಿನಂದಿಸಿದ CM ಸಿದ್ದರಾಮಯ್ಯ.

ಇಂದು ಮಧ್ಯಾಹ್ನ CM ಸಿದ್ದರಾಮಯ್ಯ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಗಿಲ್ಲಿ ನಟನನ್ನು ಭೇಟಿ ಮಾಡಿ ಅಭಿನಂದಿಸಿದರು. ಈ ವೇಳೆ ಸಚಿವ ಬೈರತಿ ಬಸವರಾಜ್ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಅಪಾರ ಅಭಿಮಾನಿಗಳು
ಬಿಗ್ ಬಾಸ್ ಕನ್ನಡ 12ನೇ ಆವೃತ್ತಿಯಲ್ಲಿ ಗಿಲ್ಲಿ ನಟ ತಮ್ಮ ಮಾತಿನ ಚಾತುರ್ಯ, ವ್ಯಕ್ತಿತ್ವ ಮತ್ತು ಜನರೊಂದಿಗೆ ಹೊಂದಿದ ನಂಟಿನ ಮೂಲಕ ರಾಜ್ಯಾದ್ಯಂತ ಅಪಾರ ಅಭಿಮಾನ ಗಳಿಸಿದ್ದರು. ಅತಿ ಹೆಚ್ಚು ಮತಗಳನ್ನು ಪಡೆದು ಅವರು ಅರ್ಹವಾಗಿಯೇ ವಿಜೇತರಾಗಿ ಹೊರಹೊಮ್ಮಿದರು.
ಇದನ್ನು ಓದಿ : ಭಾರೀ ಹೈಡ್ರಾಮಾಕ್ಕೆ ಸಾಕ್ಷಿಯಾದ ವಿಧಾನಸಭೆ ಅಧಿವೇಶನ
ರಕ್ಷಿತಾ ಶೆಟ್ಟಿ ರನ್ನರ್ ಅಪ್
ಇನ್ನು ಈ ಬಾರಿಯ ಬಿಗ್ಬಾಸ್ನಲ್ಲಿ ಗಿಲ್ಲಿ ನಟ ಅವರು ವಿಜೇತರಾಗಿದ್ದರೆ ರಕ್ಷಿತಾ ಶೆಟ್ಟಿ ರನ್ನರ್ ಅಪ್, ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.
ಅತಿ ಹೆಚ್ಚು ಮತ
ಮಂಡ್ಯದ ಮಳವಳ್ಳಿಯ ದಡದಪುರ ಗ್ರಾಮದ ಗಿಲ್ಲಿ ತಮ್ಮ ಮಾತಿನ ಮೋಡಿಯಿಂದ ಕರ್ನಾಟಕದ ಜನರ ಮನಸ್ಸು ಗೆದ್ದಿದ್ದರು. ಅತಿ ಹೆಚ್ಚು ಮತ ಪಡೆಯುವ ಮೂಲಕ ಅರ್ಹವಾಗಿಯೇ ಮೊದಲ ಸ್ಥಾನವನ್ನು ಪಡೆದರು.
ಇದನ್ನು ನೋಡಿ : ಕರ್ನಾಟಕ ಕ್ರೀಡಾಕೂಟಕ್ಕೆ ಇಂದು ಅದ್ಧೂರಿ ತೆರೆ ಸಮಾರೋಪಕ್ಕೆ ತುಮಕೂರಿನಲ್ಲಿ ಹೇಗಿದೆ ಸಿದ್ಧತೆ




