Haveri ಯಲ್ಲಿ ಚಿನ್ನಾಭರಣವನ್ನ ದೋಚಿ ಕಳ್ಳರು ಎಸ್ಕೇಪ್ – 48 ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ ಪೊಲೀಸರು.

Haveri ಜಿಲ್ಲೆ ಹಾನಗಲ್ ತಾಲೂಕಿನ ಸೋಮಾಪುರ ಗ್ರಾಮದ ಮನೆಯೊಂದರಲ್ಲಿ ಅಂದಾಜು 14 ಲಕ್ಷ ರೂ. ಮೌಲ್ಯದ ಆಭರಣ ದೋಚಿ ಪರಾರಿಯಾಗಿದ್ದ ಪ್ರಕಾರಣಕ್ಕೆ ಸಂಬಂಧಿಸಿದಂತೆ ಆಡೂರು ಠಾಣೆ ಪೊಲೀಸರು 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಭರಣಗಳನ್ನು ಕಳ್ಳತನ ಮಾಡಿ ಎಸ್ಕೇಪ್
ಸೋಮಾಪುರ ಗ್ರಾಮದ 32 ವರ್ಷದ ಶರಣಪ್ಪ ದೊಡ್ಡಬಸಪ್ಪ ಮುದಿಯಪ್ಪನವರ, ಬಂಧಿತ ಆರೋಪಿಯಾಗಿದ್ದು. ಜ. 19ರಂದು ಸೋಮವಾರ ರಾತ್ರಿ ಗ್ರಾಮದ ಬಸವರಾಜ ಗೂಳಪ್ಪ ಪೂಜಾರ ಎಂಬುವವರ ಮನೆಯ ಹಿಂಬಾಗಿಲು ಮುರಿದು, ಟ್ರಜರಿಯ ಬಾಗಿಲನ್ನು ಮುರಿದು, ಟ್ರಜರಿಯಲ್ಲಿದ್ದ 111.5 ಗ್ರಾಂ ಬಂಗಾರದ ಆಭರಣ ಮತ್ತು 310 ಗ್ರಾಂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಇದನ್ನು ಓದಿ : ಬಿಗ್ಬಾಸ್ ಗೆದ್ದ ಗಿಲ್ಲಿಯನ್ನು ಅಭಿನಂದಿಸಿದ CM

48 ಗಂಟೆಯಲ್ಲಿ ಕಳ್ಳರನ್ನು ಬಂಧಿಸಿದ ಪೊಲೀಸರು
ಈ ಪ್ರಕಾರಣಕ್ಕೆ ಸಂಬಂಧಿಸಿದಂತೆ ಹಾವೇರಿ ಎಸ್ ಪಿ ಯಶೋಧಾ ಒಂಟಗೋಡಿ, ಎಎಸ್ಪಿ ಎಲ್.ವೈ. ಶಿರಕೋಳ, ಡಿವೈಎಸ್ಪಿ ಕೆ.ವಿ. ಗುರುಶಾಂತಪ್ಪ, ಹಾನಗಲ್ ಸಿಪಿಐ ಬಸವರಾಜ ಹಳಬಣ್ಣನವರ ಅವರ ಮಾರ್ಗದರ್ಶನದಲ್ಲಿ, ಆಡೂರ ಪಿಎಸ್ಐ ಶರಣಪ್ಪ ಹಂಡ್ರಗಲ್,ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ.
ಪ್ರಕರಣ ದಾಖಲು
ಬಂಧಿತರಿಂದ ಚಿನ್ನದ ಸರ, ಉಂಗುರಗಳು, ಜುಮುಕಿ, ಹ್ಯಾಂಗಿಗ್ಸ್, ರಿಂಗ್ ಒಟ್ಟು ಅಂದಾಜು .13,69,000/- ಲಕ್ಷ ರೂ ಮೌಲ್ಯದ, ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : BREAKING: ಬೆಂಗಳೂರಲ್ಲಿ ಕಸ್ಟಮ್ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ: 7.72 ಕೆಜಿ ಕೊಕೇನ್ ವಶಕ್ಕೆ




