Bengaluru : ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು.

Bengaluru : ರಾಜ್ಯ ವಿಧಾನಸಭೆಯಲ್ಲಿ ಇಂದಿನಿಂದ ಜನವರಿ 31ರವರೆಗೆ ಜಂಟಿ ಅಧಿವೇಶನವನ್ನು ಕರೆಯಲಾಗಿದ್ದು, ಮೊದಲ ದಿನದ ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಹೈಡ್ರಾಮವನ್ನೇ ಸೃಷ್ಟಿಯಾಗಿತ್ತು. ರಾಜ್ಯಪಾಲರ ನಡೆಗೆ ಕೆರಳಿದ ಕಾಂಗ್ರೆಸ್ ಕಲಿಗಳು, ಸದನದಿಂದ ಹೊರ ಹೋಗ್ತಿದ್ದ ರಾಜ್ಯಪಾಲರನ್ನು ಕಾಂಗ್ರೆಸ್ ನಾಯಕರು ತಡೆದಿದ್ದು, ಭಾರೀ ಹೈಡ್ರಾಮ ನಡೆದಿತ್ತು. ಅಷ್ಟಕ್ಕೂ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ತಿರುಗಿ ಬೀಳಲು ಕಾರಣ ಆಗಿದ್ದಾರೂ ಏನು ಅಂತಾ ಡಿಟೇಲ್ ಆಗಿ ಹೇಳ್ತೀವಿ ನೋಡಿ.
ಜನವರಿ 31ರವರೆಗೆ ವಿಶೇಷ ಅಧಿವೇಶ
ತಮಿಳುನಾಡು, ಕೇರಳ ಬಳಿಕ ಕರ್ನಾಟಕದಲ್ಲಿ ಸರ್ಕಾರ ವರ್ಸಸ್ ರಾಜ್ಯಪಾಲರ ಸಂಘರ್ಷ ಏಳುವ ಸಾಧ್ಯತೆ ಇದೆ. ಮನರೇಗಾ ಕಾನೂನು ಬದಲಾವಣೆ ಮಾಡಿ ವಿಬಿ ರಾಮ್ ಜಿ ಕಾಯ್ದೆಯನ್ನು ತಂದಿರೋದನ್ನ ವಿರೋಧಿಸಿ ಖಂಡನಾ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರ ಇಂದಿನಿಂದ ಜನವರಿ 31ರವರೆಗೆ ವಿಶೇಷ ಅಧಿವೇಶನವನ್ನು ಕರೆದಿತ್ತು. ಆದ್ರೆ ಈ ಅಧಿವೇಶನಕ್ಕೆ ಬರಲು ರಾಜ್ಯಪಾಲರು ನಿರಾಕರಿಸಿದ್ದು, ರಾಜ್ಯಪಾಲರು ಭಾಷಣ ಮಾಡದಿದ್ರೆ ಸುಪ್ರೀಂ ಮೊರೆ ಹೋಗಲು ಸರ್ಕಾರ ನಿರ್ಧರಿಸಿತ್ತು.
ಕಾಂಗ್ರೆಸ್ ನಾಯಕರು ಹೂಗುಚ್ಛ ನೀಡಿ ಸ್ವಾಗತ
ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು ವಿಧಾನಸಭೆಗೆ ಬರ್ತಾರೋ ಇಲ್ವೋ ಎಂಬ ಅನುಮಾನ ಇತ್ತು… ಆದ್ರೆ ಸದನಕ್ಕೆ ಗರ್ವನರ್ ರಾಜ್ಯಪಾಲ ಥಾವರ್ ಚಂದ್ ಆಗಮಿಸಿದ್ದು, ಸಿಎಂ ಸಿದ್ದರಾಮಯ್ಯ, ಯು.ಟಿ ಖಾದರ್, ಬಸವರಾಜ ಹೊರಟ್ಟಿ ಸೇರಿ ಕಾಂಗ್ರೆಸ್ ನಾಯಕರು ಹೂಗುಚ್ಛ ನೀಡಿ ಸ್ವಾಗತಿಸಿದ್ರು. ಸದನಕ್ಕೆ ಬಂದ ಥಾವರ್ ಚಂದ್ ಗೆಹ್ಲೋಟ್ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರದ ಒಂದೆರಡು ಲೈನ್ನನ್ನು ಮಾತ್ರ ಓದಿ, ಶುಭಾಶಯ ಕೋರಿ ರಾಜ್ಯಪಾಲರ ಭಾಷಣಕ್ಕೆ ಸರ್ಕಾರ ಬರೆದುಕೊಟ್ಟಿದ್ದನ್ನು ಪೂರ್ತಿ ಓದದೇ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದು, ರಾಜ್ಯಪಾಲರು ಸದನದಿಂದ ಹೊರ ನಡೆದ್ರು. ರಾಜ್ಯಪಾಲರ ನಡೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕರು ಧಿಕ್ಕಾರ ಕೂಗಿದ್ರು.
ಪೂರ್ತಿ ಭಾಷಣವನ್ನು ಓದುವಂತೆ ಪಟ್ಟು
ಇನ್ನು ರಾಜ್ಯಪಾಲರು ಸದನದಿಂದ ಹೊರ ನಡೆಯುತ್ತಿರೋದನ್ನ ಖಂಡಿಸಿದ ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸೇರಿ ಹಲವು ಮಂದಿ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಅಡ್ಡಗಟ್ಟಿ ಪೂರ್ತಿ ಭಾಷಣವನ್ನು ಓದುವಂತೆ ಪಟ್ಟು ಹಿಡಿದಿದ್ರು.
ಇದನ್ನು ಓದಿ : ದಾಖಲೆ! ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ 2 ತಿಂಗಳಲ್ಲಿ ₹14 ಕೋಟಿಗೂ ಹೆಚ್ಚು ಆದಾಯ

ತನ್ನ ಬಟ್ಟೆಯನ್ನು ಹರಿದಿದ್ದಾರೆ ಎಂದು ಆರೋಪ
ಆದ್ರೆ ಇದನ್ನ ಲೆಕ್ಕಿಸದ ರಾಜ್ಯಪಾಲರು ಸದನದಿಂದ ಹೊರ ನಡೆದರು. ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಐವಾನ್ ಡಿಸೋಜಾ, ಶಾಸಕರಾದ ಶರತ್ ಬಚ್ಚೇಗೌಡ, ಪ್ರದೀಪ್ ಈಶ್ವರ್ , ಹೆಚ್.ಸಿ ಮಹದೇವಪ್ಪ ಸೇರಿ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದ್ರು. ಈ ವೇಳೆ ಬಿ.ಕೆ ಹರಿಪ್ರಸಾದ್ ಅವರನ್ನು ಮಾರ್ಷಲ್ಗಳು ಎಳೆದೊಯ್ದಿದ್ದಾರೆ. ಇದ್ರಿಂದ ಮತ್ತಷ್ಟು ಕೆರಳಿದ ಹರಿಪ್ರಸಾದ್ ಹಾಗೂ ಬಾಲಕೃಷ್ಣ ಅವರು ಮಾರ್ಷಲ್ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ತನ್ನ ಬಟ್ಟೆಯನ್ನು ಹರಿದಿದ್ದಾರೆ ಎಂದು ಆರೋಪ ಮಾಡಿದ್ರು.
ಇಂದಿನಿಂದ ಜಂಟಿ ಅಧಿವೇಶ
ಕೇಂದ್ರ ಸರ್ಕಾರವು ಯುಪಿಎ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಅಂದ್ರೆ ಮನರೇಗಾ ಹೆಸರನ್ನು ಬದಲಿಸಿ, ವಿಬಿ- ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ವಿರೋಧಿಸಿರೋ ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕರಿಸಿ, ಇಂದಿನಿಂದ ಜಂಟಿ ಅಧಿವೇಶನವನ್ನು ಕರೆದಿತ್ತು.
ಸದನದಲ್ಲಿ ಹೈಡ್ರಾ
ಅಲ್ದೇ ರಾಜ್ಯಪಾಲರು ಓದಬೇಕಿರುವ ಭಾಷಣದ ಪ್ರತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗರ ತರುವಂತಹ ಅಂಶಗಳನ್ನು ಸೇರಿಸಿತ್ತಂತೆ. ಆದ್ರೆ ಇದಕ್ಕೆ ರಾಜ್ಯಪಾಲರು ಆಕ್ಷೇಪಿಸಿದ್ದು, 11 ಪ್ಯಾರಗಳನ್ನು ಕೈಬಿಡುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸಲಹೆಯನ್ನು ಕೊಟ್ಟಿದ್ದರಂತೆ. ಆದ್ರೆ ಇದಕ್ಕೆ ಸರ್ಕಾರ ಮಾತ್ರ ಒಪ್ಪಿರಲಿಲ್ಲ. ಹೀಗಾಗಿ ಸಂಪೂರ್ಣ ಭಾಷಣ ಓದುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದು, ಸದನದಲ್ಲಿ ಹೈಡ್ರಾಮವನ್ನು ಸೃಷ್ಟಿಸಿದ್ದರು.
ಸಿಎಂ ಸಿದ್ದರಾಮಯ್ಯ ಖಂಡನೆ
ಇನ್ನು ರಾಜ್ಯಪಾಲರ ನಡೆಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸಯವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ವಿಪಕ್ಷಗಳಿಂದ ಹೊಸ ಕಾಯ್ದೆಗೆ ಉದ್ದೇಶಪೂರ್ವಕವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದು, ಕೇಂದ್ರದ ತಪ್ಪನ್ನು ಮರೆಮಾಚಲು ರಾಜ್ಯ ಪಾಲರಿಂದ ಭಾಷಣ ಮಾಡಿಸಿದ್ದು, ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು. ಅಲ್ದೇ ರಾಜ್ಯಪಾಲರು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಸಚಿವ ಹೆಚ್.ಕೆ ಪಾಟೀಲ್ ರಾಜ್ಯಪಾಲರ ವಿರುದ್ಧ ಆಕ್ರೋಶ ಹೊರಹಾಕಿದ್ರು.

ವಿಪಕ್ಷಗಳು ಟೀಕಾಪ್ರಹಾರ
ಇನ್ನು ರಾಜ್ಯಪಾಲರ ವಿರುದ್ಧ ಕಿಡಿಕಾರಿದ ಆಡಳಿತ ಪಕ್ಷದ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸುತ್ತಿದ್ದು, ರಾಜ್ಯಪಾಲರನ್ನೇ ತಡೆದು ಗೂಂಡಾಗಿರಿ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ರು. ಒಟ್ನಲ್ಲಿ ಮನರೇಗಾ ಕಾಯ್ದೆ ವಿಚಾರವಾಗಿ ಸರ್ಕಾರ ಹಾಗೂ ರಾಜ್ಯಪಾಲರದ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ಸಂಘರ್ಷ ಯಾವ ಮಟ್ಟಿಗೆ ಹೋಗಲಿದೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನು ನೋಡಿ : ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಪ್ರಜ್ವಲ್ ರಿತ್ತಿ ಕುಟುಂಬಸ್ಥರಿಗೆ ಸೈಟ್: ಲಕ್ಕುಂಡಿ ಗ್ರಾಮ ಪಂಚಾಯ್ತಿ ಘೋಷಣೆ




