Dakshina kannada : ಕಳೆದ ಎರಡು ತಿಂಗಳಲ್ಲಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಂದ ದಾಖಲೆಯ ದೇಣಿಗೆ ಹರಿದುಬಂದಿದೆ.

Dakshina Kannada ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ 2025ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಭಕ್ತರಿಂದ ಅಪಾರ ದೇಣಿಗೆ ಬಂದಿದ್ದು, ಒಟ್ಟು ₹14 ಕೋಟಿ 77 ಲಕ್ಷ 80 ಸಾವಿರ ಆದಾಯ ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಆದಾಯ ವೃದ್ಧಿಗೆ ಕಾರಣವೇನು..?
ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶೇಷವಾಗಿ ನಾಗರಪಂಚಮಿ, ಕಾರ್ತಿಕ ಮಾಸ, ಡಿಸೆಂಬರ್ ತಿಂಗಳ ರಜಾಕಾಲ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಭಕ್ತರ ಹರಿವು ಗಣನೀಯವಾಗಿ ಹೆಚ್ಚಿರುವುದನ್ನು ಆದಾಯ ವೃದ್ಧಿಗೆ ಪ್ರಮುಖ ಕಾರಣವೆಂದು ತಿಳಿಸಲಾಗಿದೆ.
ಇದನ್ನು ಓದಿ : 500ನೇ ಗೆಲುವು ಸಾಧಿಸಿ ವಿಶೇಷ ದಾಖಲೆ ಬರೆದ P.V Sindhu
ನವೆಂಬರ್ ಆದಾಯ
- ವಿವಿಧ ಪೂಜಾ ಸೇವೆಗಳಿಂದ: ₹4,56,21,739
- ಹುಂಡಿಯಿಂದ: ₹1,09,76,957
- ಅನ್ನದಾನ ನಿಧಿಯಿಂದ: ₹83,57,769
ಡಿಸೆಂಬರ್ ಆದಾಯ
- ವಿವಿಧ ಸೇವೆಗಳಿಂದ: ₹5,30,18,923
- ಹುಂಡಿ ಸಂಗ್ರಹ: ₹1,90,63,518
- ಅನ್ನದಾನ ನಿಧಿ: ₹1,07,41,594
ಇದಕ್ಕಿಂತ ಹೊರತು, ದೇವಸ್ಥಾನದ ವಸತಿಗೃಹಗಳು, ಅತಿಥಿ ಸೌಕರ್ಯಗಳು ಹಾಗೂ ಇತರೆ ಮೂಲಗಳಿಂದಲೂ ಗಮನಾರ್ಹ ಪ್ರಮಾಣದ ಆದಾಯ ಲಭಿಸಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ತಿಳಿಸಿದ್ದಾರೆ.
ಭಕ್ತರಿಗೆ ಉತ್ತಮ ಸೌಲಭ್ಯ
ಭಕ್ತರ ಸಹಕಾರದಿಂದ ಸಂಗ್ರಹವಾಗಿರುವ ಈ ಆದಾಯವನ್ನು ದೇವಾಲಯದ ಅಭಿವೃದ್ಧಿ ಕಾರ್ಯಗಳು, ಅನ್ನದಾನ ಸೇವೆ, ಮೂಲಸೌಕರ್ಯ ವೃದ್ಧಿ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬಳಸಲಾಗುತ್ತಿದೆ. ಮುಂದೆ ಇನ್ನಷ್ಟು ಸುವ್ಯವಸ್ಥಿತ ಸೇವೆಗಳೊಂದಿಗೆ ಭಕ್ತರಿಗೆ ಅನುಕೂಲ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಇದನ್ನು ನೋಡಿ : ಎ1 ಆರೋಪಿ ಬಾಲಕೃಷ್ಣನೇ ಎಂದು ಸದನದಲ್ಲಿ ಗರ್ಜಿಸಿದ ಆರ್.ಅಶೋಕ್




