Bengaluru : ಸರ್ಕಾರ ಕೊಟ್ಟ ಪೂರ್ಣ ಭಾಷಣ ಓದದೇ ಹೊರಟ ರಾಜ್ಯಪಾಲ ಗೆಹ್ಲೋಟ್..ಜಂಟಿ ಅಧಿವೇಶನದಲ್ಲಿ ಕೆಲವೇ ಅಂಶಗಳ ಉಲ್ಲೇಖ ,ಕಾಂಗ್ರೆಸ್ ಸದಸ್ಯರಿಂದ ವಿಧಾನಸೌಧದಲ್ಲಿ ಆಕ್ರೋಶ..!!

Bengaluru : ಕರ್ನಾಟಕ ವಿಧಾನಮಂಡಲದ ವಿಶೇಷ ಅಧಿವೇಶನದ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ನಡೆ ಭಾರೀ ಚರ್ಚೆಗೆ ಕಾರಣವಾಗಿದೆ. ಸರ್ಕಾರ ನೀಡಿದ್ದ ಪೂರ್ಣ ಭಾಷಣವನ್ನು ಓದದೇ, ಕೆಲವೇ ಅಂಶಗಳನ್ನು ಮಾತ್ರ ಉಲ್ಲೇಖಿಸಿ ಅವರು ಅಧಿವೇಶನ ಮುಗಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲ
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ವಿಧಾನಸೌಧಕ್ಕೆ ಆಗಮಿಸಿ, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಆರಂಭಿಸಿದರು. ಆರಂಭದಲ್ಲೇ ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಅವರು,“ಆರ್ಥಿಕ ಸವಾಲುಗಳನ್ನು ನಿಭಾಯಿಸಲು ನನ್ನ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದರು.
ಇದನ್ನು ಓದಿ : Dina Bhavishya : ದಿನ ಭವಿಷ್ಯ 22 ಜನವರಿ 2026
ಆದರೆ ಸರ್ಕಾರ ನೀಡಿದ್ದ ಸಂಪೂರ್ಣ ಭಾಷಣವನ್ನು ಓದದೆ, ಕೆಲವೇ ಸಾಲುಗಳಲ್ಲಿ ತಮ್ಮ ಮಾತು ಮುಗಿಸಿದರು.
“ಅವರಿಗೆ ನನ್ನ ಶುಭಾಶಯಗಳು. ಜೈ ಹಿಂದ್, ಜೈ ಕರ್ನಾಟಕ” ಎಂದು ಹೇಳುವ ಮೂಲಕ ರಾಜ್ಯಪಾಲರು ಭಾಷಣಕ್ಕೆ ತೆರೆ ಎಳೆದರು.
ಕಾಂಗ್ರೆಸ್ ಸದಸ್ಯರಿಂದ ತೀವ್ರ ಆಕ್ಷೇಪ
ರಾಜ್ಯಪಾಲರು ಪೂರ್ಣ ಭಾಷಣ ಮಾಡದೆ ಹೊರಟ ಹಿನ್ನೆಲೆ, ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದರು.
ರಾಜ್ಯಪಾಲರ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದ ಕಾಂಗ್ರೆಸ್ ಶಾಸಕರು, ಇದು ಸರ್ಕಾರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಈ ಘಟನೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ರಾಜ್ಯಪಾಲರ ನಡೆ ಸಂವಿಧಾನಾತ್ಮಕವಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಮುಂದಿನ ದಿನಗಳಲ್ಲಿ ಈ ವಿಷಯ ರಾಜಕೀಯ ಬಿಸಿ ಹೆಚ್ಚಿಸುವ ಸಾಧ್ಯತೆ ಇದೆ.
ಇದನ್ನು ನೋಡಿ : CHIKKABALLAPURA |ಶಿಡ್ಲಘಟ್ಟದಲ್ಲಿ ಚಿಮುಲ್ ಎಲೆಕ್ಷನ್ ಕಾವು




