Amravati : ಆಂಧ್ರದಲ್ಲಿ ಮತ್ತೊಂದು ಭೀಕರ ಬಸ್ ದುರಂತ , ಟೈರ್ ಸ್ಫೋಟದಿಂದ ನಿಯಂತ್ರಣ ತಪ್ಪಿದ ಬಸ್–ಕಂಟೈನರ್ ಡಿಕ್ಕಿ , ಮೂವರು ಸಜೀವ ದಹನ, 36 ಪ್ರಯಾಣಿಕರು ಪಾರು..!!

Amravati : ಕೆಲ ದಿನಗಳ ಹಿಂದಷ್ಟೇ ಕರ್ನೂಲ್ ಬಳಿ ನಡೆದ ಬಸ್ ದುರಂತದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ, ಇದೀಗ ಆಂಧ್ರಪ್ರದೇಶದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.
ಈ ದುರಂತದಲ್ಲಿ ಮೂವರು ಸಜೀವ ದಹನವಾಗಿದ್ದು, ರಾಜ್ಯದ ಜನರಲ್ಲಿ ಆತಂಕ ಮೂಡಿಸಿದ.
ನಸುಕಿನ ಜಾವ ಸಂಭವಿಸಿದ ಅಪಘಾತ
ಗುರುವಾರ ನಸುಕಿನ ಜಾವ ಸುಮಾರು 1:30ರ ಸುಮಾರಿಗೆ, ನಂದ್ಯಾಲ್ (Nandyal) ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ. ಖಾಸಗಿ ಬಸ್ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ, ಡಿವೈಡರ್ ಹಾರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತಕ್ಷಣವೇ ಬಸ್ ಮತ್ತು ಕಂಟೈನರ್ ಎರಡೂ ಧಗಧಗನೆ ಹೊತ್ತಿ ಉರಿದಿವೆ. ಅಪಘಾತಕ್ಕೀಡಾದ ಕಂಟೈನರ್ ಲಾರಿಯಲ್ಲಿ ಬೈಕ್ಗಳನ್ನು ಸಾಗಿಸಲಾಗುತ್ತಿತ್ತು. ಬೆಂಕಿಯ ತೀವ್ರತೆಗೆ ವಾಹನಗಳಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಇದನ್ನು ಓದಿ : Dina Bhavishya : ದಿನ ಭವಿಷ್ಯ 22 ಜನವರಿ 2026
ಪ್ರಯಾಣಿಕರ ಜೀವ ಉಳಿಸಲು ಚಾಲಕನ ಸಾಹಸ – ಆದರೆ ಸಾವು
Amravati : ಬೆಂಕಿ ವ್ಯಾಪಿಸುತ್ತಿದ್ದರೂ ಬಸ್ ಚಾಲಕ ಮತ್ತು ಕಂಡಕ್ಟರ್ ಕಿಟಕಿ ಗಾಜುಗಳನ್ನು ಒಡೆದು ಪ್ರಯಾಣಿಕರನ್ನು ರಕ್ಷಿಸಲು ಮುಂದಾದರು. ಸ್ಥಳೀಯ ನಿವಾಸಿಗಳೂ ಧೈರ್ಯದಿಂದ ನೆರವಿಗೆ ಧಾವಿಸಿದರು.
ಆದರೆ ದುರ್ಘಟನೆಯಲ್ಲಿ ಬಸ್ ಚಾಲಕ, ಕಂಟೈನರ್ ಚಾಲಕ ಮತ್ತು ಲಾರಿ ಕ್ಲೀನರ್ ಸೇರಿ ಮೂವರು ಸಜೀವ ದಹನವಾಗಿ ಸಾವನ್ನಪ್ಪಿದ್ದಾರೆ.
36 ಪ್ರಯಾಣಿಕರು ಸುರಕ್ಷಿತ, ಗಾಯಾಳು ಆಸ್ಪತ್ರೆಗೆ ದಾಖಲು
ಈ ಬಸ್ ಆಂಧ್ರದ ನೆಲ್ಲೂರಿನಿಂದ ಹೈದರಾಬಾದ್ಗೆ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ ಬಸ್ನಲ್ಲಿದ್ದ 36 ಪ್ರಯಾಣಿಕರು ಸುರಕ್ಷಿತರಾಗಿದ್ದು, ಗಾಯಗೊಂಡವರನ್ನು ನಂದ್ಯಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಘಟನೆಯಿಂದ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಪ್ರಾಥಮಿಕ ತನಿಖೆಯ ಪ್ರಕಾರ, ಬಲಭಾಗದ ಟೈರ್ ಸ್ಫೋಟಗೊಂಡ ಬಳಿಕ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ, ನಂತರ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ.
ಇದನ್ನು ನೋಡಿ : CHIKKABALLAPURA |ಶಿಡ್ಲಘಟ್ಟದಲ್ಲಿ ಚಿಮುಲ್ ಎಲೆಕ್ಷನ್ ಕಾವು




