Tumakuru : ಸರ್ಕಾರಿ ಶಾಲೆಗಳು ಅಂದ್ರೆ ಮೂಗು ಮುರಿಯುವವರೇ ಹೆಚ್ಚು, ಕೆಲ ಪೋಷಕರು ತಮ್ಮ ಮಕ್ಕಳನ್ನು ಇಂಟರ್ ನ್ಯಾಷನಲ್ ಸ್ಕೂಲ್ನಲ್ಲೇ ಓದಬೇಕು ಅನ್ನುವವರೇ ಹೆಚ್ಚಾಗಿದೆ ಪ್ರವೇಟ್ ಸ್ಕೂಲ್ಗೆ ಸೇರಿಸ್ತಾ ಇದ್ದಾರೆ .

Tumakuru : ಸರ್ಕಾರಿ ಶಾಲೆಗಳು ಈಗ ಹೈಟೆಕ್ ಆಗ್ತಿವೆ ಆದ್ರೆ ಇನ್ನು ಅದೆಷ್ಟೋ ಸರ್ಕಾರಿ ಶಾಲೆಗಳು ಮೂಲ ಭೂತ ಸೌಕರ್ಯಗಳಿಲ್ಲದೇ ವಂಚಿತರಾಗ್ತಿದ್ದು,
ಇಲ್ಲೊಬ್ಬ ಪುಟ್ಟ ಬಾಲಕಿ ತನ್ನ ಶಾಲೆಯ ಕಾಂಪೌಂಡ್ಗಾಗಿ ಏಕಾಂಗಿಯಾಗಿ ಹೋರಾಟ ಮಾಡ್ತಾ ಇದ್ದು, ಕಳೆದ 6 ತಿಂಗಳಿಂದ ಶಾಲೆಯನ್ನೇ ತೊರೆದಿದ್ದಾಳೆ.

ಹೀಗೆ ಪತ್ರ ಬರೆಯುತ್ತಿರೋ, ಡಿಸಿ ಕಚೇರಿ ಬಳಿ ಡಿಸಿ ಭೇಟಿಯಾಗಿ ಕಾಯ್ತಾ ಇರೋ ಪುಟ್ಟ ಬಾಲಕಿಯ ಹೆಸರು ಸಿಮ್ರಾ ಸನೋಬರ್ ಅಂತಾ ತುಮಕೂರು ಜಿಲ್ಲೆಯ ಬೆಳಧರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ,
ಬೆಳಧರದ ಸರ್ಕಾರಿ ಶಾಲೆ ಸ್ವಾತಂತ್ರ್ಯ ಪೂರ್ವದ ಶಾಲೆಯಾಗಿದ್ದು, ಈ ಶಾಲೆಯ ಆಟದ ಮೈದಾನಕ್ಕೆ ಒಂದು ಕಾಂಪೌಂಡ್ ಇಲ್ಲ.
ಇಲ್ಲಿ ಪಕ್ಕದಲ್ಲಿಯೇ ಚೌಟ್ರಿ ಇದ್ದು, ಚೌಟ್ರಿ ನಿರ್ಮಾಣದಿಂದಾಗಿ ಮಕ್ಕಳ ಪಾಠಕ್ಕೆ ಮತ್ತು ಆಟಕ್ಕೆ ತೊಂದರೆಯಾಗುತ್ತಿದೆ. ಅಲ್ದೇ ಗಾಡಿಗಳನ್ನು ಶಾಲಾ ಆವರಣದಲ್ಲೇ ಗಾಡಿಗಳನ್ನು ನಿಲ್ಲಿಸುವುದರಿಂದ ಮಕ್ಕಳು ಆಟವಾಡಲು ಸಾದ್ಯವಾಗ್ತಾ ಇಲ್ಲ..

ಇದ್ರಿಂದ ಬೇಸರಗೊಂಡ ವಿದ್ಯಾರ್ಥಿನಿ ಸಿಮ್ರಾ ಈ ಹಿಂದೆ ಪ್ರಧಾನಿ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯ ಹಾಗೂ ಬಿಇಓಗೆ ಕಳೆದ ಆಗಸ್ಟ್ 3 ರಂದು ಪತ್ರ ಬರೆದು, ಆಟದ ಮೈದಾನಕ್ಕೆ ಕಾಂಪೌಂಡ್ ನಿರ್ಮಾಣ ಮಾಡುವ ಮೊರೆ ಇಟ್ಟಿದ್ರು.

ಆದ್ರೆ ಯಾವುದೇ ಪ್ರಯೋಜನ ಆಗದ ಹಿನ್ನೆಲೆ ವಿದ್ಯಾರ್ಥಿನಿ ಸಿಮ್ರಾ ಡಿಸಿ ಭೇಟಿಯಾಗಿ ಮನವಿಯನ್ನು ಕೂಡ ಮಾಡಿದ್ದರು…
ಅಷ್ಟೇ ಯಾಕೆ ಶಾಲೆಯ ಕಾಂಪೌಂಡ್ಗಾಗಿ ಬಾಲಕಿ ಕಳೆದ 6 ತಿಂಗಳಿನಿಂದ ಶಾಲೆಗೆ ಹೋಗದೇ ಏಕಾಂಗಿಯಾಗಿ ಹೋರಾಟ ಮಾಡ್ತಾ ಇದ್ದರು..
ಕಾಪೌಂಡ್ ನಿರ್ಮಾಣ ಆಗುವವರೆಗೂ ಯಾವುದೇ ಕಾರಣಕ್ಕೂ ಶಾಲೆಗೆ ಹೋಗದಿರಲು ಪಟ್ಟು ಹಿಡಿದಿದ್ದಳು..

ಇನ್ನು ವಿದ್ಯಾರ್ಥಿನಿ ಸಿಮ್ರಾ ಸನೋಬರ್ ಕಳೆದ ಆರು ತಿಂಗಳಿನಿಂದ ಶಾಲೆಯನ್ನೇ ತೊರೆದಿದ್ದು, ಇದೀಗ ಶಾಲೆ ಬಿಟ್ಟ ವಿದ್ಯಾರ್ಥಿನಿಯನ್ನು ಮತ್ತೆ ಶಾಲೆಗೆ ಸೇರಿಸುವ ಕೆಲಸವನ್ನು ನ್ಯಾಯಾಧೀಶರು ಮಾಡಿದ್ದಾರೆ.
ಹೌದು ನ್ಯಾಯಮೂರ್ತಿಯಾದ ನೂರು ಉನ್ನಿಸ ಅವರು ಶಾಲೆ ಬಿಟ್ಟ ವಿದ್ಯಾರ್ಥಿಯನ್ನು ಹುಡುಕಿಕೊಂಡು ಮನೆಗೆ ತೆರಳಿ, ವಿದ್ಯಾರ್ಥಿಯನ್ನು ಮನವೊಲಿಸಿದ್ರು.
ನ್ಯಾಯಮೂರ್ತಿಗಳ ಮನವೊಲಿಕೆ ಸಕ್ಸಸ್ ಆಗಿದ್ದು, ವಿದ್ಯಾರ್ಥಿನಿ ಸಿಮ್ರಾರನ್ನು ಖುದ್ದು ನ್ಯಾಯಮೂರ್ತಿ ನೂರ್ ಉನ್ನಿಸಾ ಅವರೇ ಶಾಲೆಗೆ ಕರೆದುಕೊಂಡು ಹೋಗಿ ಶಾಲೆಗೆ ಕಳುಹಿಸಿದ್ದಾರೆ.
ಅಲ್ಲದೇ ನ್ಯಾಯಾಧೀಶರು ನೂರ್ ಉನ್ನಿಸಾ ಅವರು ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ರು.

ವಿದ್ಯಾರ್ಥಿನಿ ಸಿಮ್ರಾ ಸನೋವರ್ ಅವರನ್ನು ನ್ಯಾಯಮೂರ್ತಿ ನೂರ್ ಉನ್ನಿಸಾ, ಎಸಿ ನಾಹೀದಾ ಝಮ್ ಝಮ್ ಅವರೇ ಕರೆತಂದು ಶಾಲೆಗೆ ಬಿಟ್ಟರು.
ಇದೇ ವೇಳೆ ನೂರ್ ಉನ್ನಿಸಾ ಹಾಗೂ ನಾಹೀದಾ ಝಮ್ ಝಮ್ ಅವರು ಮಕ್ಕಳೊಂದಿಗೆ ಮಕ್ಕಳಾದ್ರು.

ಇನ್ನು ನ್ಯಾಯಮೂರ್ತಿ ನೂರ್ ಉನ್ನಿಸಾ, ಎಸಿ ನಾಹೀದಾ ಝಮ್ ಝಮ್, ತಹಶೀಲ್ದಾರ್ ರಾಜೇಶ್ವರಿ ನೇತೃತ್ವದಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿನಿಯನ್ನ ಮನವೊಲಿಸಿ,
ಶಾಲೆಗೆ ಸೇರಿಸಿದ್ದು, ನ್ಯಾಯಮೂರ್ತಿಯರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.




