Sindhanur : ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ ಕ್ರಾಸ್ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ.

Sindhanur ನಿಂದ ಕುರಿ ಸಂತೆ ಮುಗಿಸಿಕೊಂಡು ಬಳ್ಳಾರಿ ಕಡೆಗೆ ಹೊರಟಿದ್ದ ಟಾಟಾ ಏಸ್ (Tata Ace) ವಾಹನಕ್ಕೆ ಎದುರಿನಿಂದ ಬಂದ ಮಹೀಂದ್ರಾ ಬೊಲೆರೊ ಪಿಕಪ್ (Bolero Pick-Up) ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಮೃತರ ಮಾಹಿತಿ
ಈ ದುರ್ಘಟನೆಯಲ್ಲಿ ಮೃತಪಟ್ಟವರು , ಬಳ್ಳಾರಿ ಜಿಲ್ಲೆಯ ಚೆಳ್ಳೆಕೂಡ್ಲೂರಿನ ಸಣ್ಣ ಯಲ್ಲಯ್ಯ (40) ರಂಗನಾಥ (15) ಹರಿ (36) ಮಲ್ಲಯ್ಯ ಮಧುರಿ (50) ಮತ್ತೊಬ್ಬ ಮೃತನ ಗುರುತು ಇನ್ನೂ ಪತ್ತೆಯಾಗಿಲ್ಲ.
ಮೃತರಲ್ಲಿ ಸಣ್ಣ ಯಲ್ಲಯ್ಯ ಮತ್ತು ರಂಗನಾಥ ತಂದೆ–ಮಗ ಎಂಬುದು ತಿಳಿದುಬಂದಿದೆ. ಅಪಘಾತದಲ್ಲಿ ಟಾಟಾ ಏಸ್ನಲ್ಲಿ ಸಾಗಿಸುತ್ತಿದ್ದ ಕುರಿಗಳು ಸಹ ಸಾವನ್ನಪ್ಪಿವೆ.
ಇದನ್ನು ಓದಿ : Greater Bengaluru ಚುನಾವಣೆಗೆ ಆಯೋಗ ರೆಡಿ – EVMಗೆ ಕೊಕ್!

ಟಾಟಾ ಏಸ್ ವಾಹನದಲ್ಲಿದ್ದ ಎಂಟು ಜನರಲ್ಲಿ ಐವರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಿಕಪ್ ವಾಹನದಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಪೊಲೀಸ್ ಕ್ರಮ
ಈ ಅಪಘಾತ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ನೋಡಿ : TUMAKUR | ಗೌರಿಶಂಕರ್ ಕೈ ಸೇರಿದ ಬಳಿಕ ಕ್ಷೇತ್ರಕ್ಕೆ ದಳಪತಿ ಎಂಟ್ರಿ




