Bengaluru : ಇದು ತಿರುಚಿದ ವಿಡಿಯೋ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (Ramachandra Rao) ಹೇಳಿದ್ದಾರೆ.

Bengaluru : ಮಹಿಳೆಯರೊಂದಿಗೆ ರಾಸಲೀಲೆ ನಡೆಸಿರುವುದಾಗಿ ಹೇಳಲಾಗಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರು ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋ ಪೂರ್ಣವಾಗಿ ತಿರುಚಿತದ್ದು ಮತ್ತು ಸುಳ್ಳು ಎಂದು ಅವರು ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಇದನ್ನು ಓದಿ : ಆನಗೋಡು ಕಿರು ಮೃಗಾಲಯದಲ್ಲಿ 4 ಚುಕ್ಕಿ ಜಿಂಕೆಗಳ ನಿಗೂಢ ಸಾವು

ಇದು ಸುಳ್ಳು ಮತ್ತು ತಿರುಚಿದ ವಿಡಿಯೋ
ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡುವ ಉದ್ದೇಶದಿಂದ ಇಂದು ಕಚೇರಿಗೆ ಆಗಮಿಸಿದ ರಾಮಚಂದ್ರ ರಾವ್, ಮಾಧ್ಯಮಗಳೊಂದಿಗೆ ಮಾತನಾಡುತ್ತಾ,
“ಈ ವಿಡಿಯೋ ತಿರುಚಿತದ್ದಾಗಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಈ ಬಗ್ಗೆ ವಕೀಲರೊಂದಿಗೆ ಚರ್ಚಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ವಿಡಿಯೋ ಪ್ರಕರಣದ ಬಗ್ಗೆ ನೇರವಾಗಿ ಸ್ಪಷ್ಟನೆ ನೀಡುವ ಸಲುವಾಗಿ ರಾಮಚಂದ್ರ ರಾವ್ ಅವರು ಇಂದು ಪರಮೇಶ್ವರ್ ಕಚೇರಿಗೆ ಆಗಮಿಸಿದ್ದರು. ಆದರೆ, ಮನೆ ಒಳಗೆ ಪ್ರವೇಶಿಸುವ ಮುನ್ನವೇ ಗೃಹ ಸಚಿವ ಪರಮೇಶ್ವರ್ ಅವರು ಭೇಟಿಗೆ ನಿರಾಕರಿಸಿದ್ದಾರೆ ಎಂಬ ಮಾಹಿತಿ ದೊರಕಿತು.
ಸಿಬ್ಬಂದಿ ಮೂಲಕ ನಿರಾಕರಣೆ
ಪರಮೇಶ್ವರ್ ಅವರ ಸಿಬ್ಬಂದಿಯೇ ರಾಮಚಂದ್ರ ರಾವ್ ಅವರಿಗೆ ಭೇಟಿ ಸಾಧ್ಯವಿಲ್ಲ ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಅವರು ಸುಮಾರು ಐದು ನಿಮಿಷಗಳಲ್ಲೇ ಕಚೇರಿಯಿಂದ ಹಿಂದಿರುಗಿದ್ದಾರೆ.

ವಿಡಿಯೋ ತಿರುಚಿತದ್ದು ಎಂದು ಡಿಜಿಪಿ ರಾಮಚಂದ್ರ ರಾವ್ ಸ್ಪಷ್ಟಪಡಿಸಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನು ನೋಡಿ : KSRTC WORKERS PROTEST | ರೊಚ್ಚಿಗೆದ್ದ ಸರ್ಕಾರಿ ಸಾರಿಗೆ ನೌಕರರು




