Mouni Amavasya 2026 : ಮೌನಿ ಅಮಾವಾಸ್ಯೆ ಅಥವಾ ಮಾಘ ಅಮಾವಾಸ್ಯೆ ಹಿಂದೂ ಧರ್ಮದಲ್ಲಿ ಪೂರ್ವಿಕರ ಸ್ಮರಣೆಗೆ ಸಮರ್ಪಿತವಾದ ಅತ್ಯಂತ ಪವಿತ್ರ ದಿನವಾಗಿದೆ..

Mouni Amavasya 2026 : ಈ ದಿನ ಪೂರ್ವಿಕರು ನಮ್ಮ ಸುತ್ತಲೂ ಇದ್ದು, ನಮಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ದಾನ, ತರ್ಪಣ, ಶ್ರಾದ್ಧ ಮತ್ತು ಪವಿತ್ರ ಸ್ನಾನಗಳಿಗೆ ಈ ದಿನ ವಿಶೇಷ ಮಹತ್ವ ನೀಡಲಾಗಿದೆ.
ಮೌನಿ ಅಮಾವಾಸ್ಯೆಯ ಮಹತ್ವ
ವರ್ಷದಲ್ಲಿ ಬರುವ ಅಮಾವಾಸ್ಯೆಗಳಲ್ಲಿ ಮೌನಿ ಅಮಾವಾಸ್ಯೆ ವಿಶಿಷ್ಟ ಸ್ಥಾನ ಹೊಂದಿದೆ. ಇದು ಮಾಘ ಮಾಸದಲ್ಲಿ ಬರುವುದರಿಂದ ಮಾಘ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ.
ಇಂದು ಭಾನುವಾರ (ಜ.18) ಬಂದಿರುವುದರಿಂದ ಈ ಅಮಾವಾಸ್ಯೆಯ ಪ್ರಾಶಸ್ತ್ಯ ಇನ್ನಷ್ಟು ಹೆಚ್ಚಾಗಿದೆ.
ಪೌರಾಣಿಕ ನಂಬಿಕೆಯ ಪ್ರಕಾರ, ಮಹಾಲಯ ಅಮಾವಾಸ್ಯೆಯಂದು ಪೂರ್ವಿಕರಿಗೆ ಶ್ರಾದ್ಧ ಮಾಡಿದರೆ, ಮೌನಿ ಅಮಾವಾಸ್ಯೆಯಂದು ಅವರು ಸಾಕ್ಷಾತ್ ನಮ್ಮನ್ನು ಕಾಣಲು, ಕನಸುಗಳಲ್ಲಿ ಬಂದು ಮಾರ್ಗದರ್ಶನ ನೀಡಲು ಬರುತ್ತಾರೆ.
ಈ ದಿನ ಪೂರ್ವಿಕರು ನಮ್ಮ ಜೀವನದ ಲೋಪದೋಷಗಳನ್ನು ಸರಿಪಡಿಸಲು, ಆಯುಷ್ಯ ಮತ್ತು ಆರೋಗ್ಯ ನೀಡಲು , ದುಷ್ಟ ಶಕ್ತಿಗಳನ್ನು ದೂರ ಮಾಡಲು ,ಪಾಪ ವಿಮೋಚನೆ ಹಾಗೂ ಮೋಕ್ಷಕ್ಕೆ ದಾರಿ ತೋರಿಸಲು ಸಹಕರಿಸುತ್ತಾರೆ ಎಂದು ನಂಬಲಾಗಿದೆ.
ಮೌನಿ ಅಮಾವಾಸ್ಯೆಯಂದು ಮಾಡಬೇಕಾದ ದಾನ
ಪೂರ್ವಿಕರನ್ನು ಸಂತೃಪ್ತಿಪಡಿಸಲು ದಾನ ಅತ್ಯಂತ ಶ್ರೇಷ್ಠ ಮಾರ್ಗ. ವಿಶೇಷವಾಗಿ ಅನಾಥರು , ಅಶಕ್ತರು , ವೃದ್ಧರು , ರೋಗಿಗಳು , ದೀನದಲಿತರು ಇವರಿಗೆ ಆಹಾರ, ಬಟ್ಟೆ, ಔಷಧಿ ಅಥವಾ ಕೈಲಾದ ಸಹಾಯ ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ.
ಸಪ್ತ ನದಿ ಸ್ನಾನದ ವಿಧಾನ
ಈ ದಿನ ಸ್ನಾನಕ್ಕೆ ಅಪಾರ ಮಹತ್ವವಿದೆ. ಸ್ನಾನದ ವೇಳೆ ಕೆಳಗಿನ ಮಂತ್ರವನ್ನು ಜಪಿಸಬೇಕು
“ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರು”
ಸ್ನಾನದ ನೀರಿಗೆ ಸ್ವಲ್ಪ ಅರಿಶಿಣ ಮತ್ತು ಉಪ್ಪು ಸೇರಿಸುವುದು ಅತ್ಯಂತ ಶುಭ. ಈ ಸ್ನಾನವು ಪಾಪ ಭಾರವನ್ನು ಕಡಿಮೆ ಮಾಡಿ, ಜೀವನದ ಕಂಟಕಗಳಿಂದ ಮುಕ್ತಿ ನೀಡುತ್ತದೆ.
ಪೂಜಾ ವಿಧಾನ ಮತ್ತು ಮಂತ್ರ ಜಪ
ಮೌನಿ ಅಮಾವಾಸ್ಯೆಯಂದು ಭಗವದಾರಾಧನೆ , ದೇವರ ಸ್ಮರಣೆ , ಲಕ್ಷ್ಮೀ ಅಷ್ಟೋತ್ತರ ಪಠಣ ,ಮಾಡುವುದರಿಂದ ಪೂರ್ವಿಕರ ಸಂಪೂರ್ಣ ಆಶೀರ್ವಾದ ಲಭಿಸುತ್ತದೆ.
ಮಂತ್ರ:
“ಓಂ ಶ್ರೀ ಲಕ್ಷ್ಮೀ ಗಣಪತಯೇ ನಮಃ” — ಈ ಮಂತ್ರ ಜಪಿಸುವುದು ವಿಶೇಷ ಫಲ ನೀಡುತ್ತದೆ.
ಶ್ರಾದ್ಧ ಮತ್ತು ತರ್ಪಣ ವಿಧಾನ
ಯಥಾವಿಧಿಯಾಗಿ ತರ್ಪಣ ಮತ್ತು ಶ್ರಾದ್ಧ ನೆರವೇರಿಸಬೇಕು. ಜೊತೆಗೆ ಹಣ್ಣು , ತರಕಾರಿಗಳು , ಧಾನ್ಯಗಳು , ಹಾಲು, ಮೊಸರು ,ಆಹಾರ ಪದಾರ್ಥಗಳ ಇವುಗಳನ್ನು ವಿಪ್ರರು, ಬ್ರಾಹ್ಮಣರು ಅಥವಾ ಅರ್ಚಕರಿಗೆ ದಾನ ಮಾಡಬಹುದು. ಬೆಲ್ಲದ ಅನ್ನ ದಾನ ವಿಶೇಷ ಪುಣ್ಯ ಫಲ ನೀಡುತ್ತದೆ.
ಸಂಜೆಯ ವಿಶೇಷ ಪರಿಹಾರ
ಸಂಜೆ ಸಮಯದಲ್ಲಿ ಮನೆಯ ಸಿಂಹದ್ವಾರದ ಎರಡೂ ಕಡೆ , ಪ್ಲಾಸ್ಟಿಕ್ ಬೌಲ್ನಲ್ಲಿ ಉಪ್ಪು ಹಾಕಿ , ಅದರ ಮೇಲೆ ಮೆಣಸು ಇಡುವುದು .
ಮನೆಯಲ್ಲಿನ ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಿ ಶುಭ ವಾತಾವರಣವನ್ನು ಉಂಟುಮಾಡುತ್ತದೆ.
ಮೌನಿ ಅಮಾವಾಸ್ಯೆ ಪ್ರಾರ್ಥನೆ, ಪೂಜೆ, ದಾನ ಮತ್ತು ಪೂರ್ವಿಕರ ಸ್ಮರಣೆಗೆ ಅತ್ಯಂತ ಶ್ರೇಷ್ಠ ದಿನ. ಈ ದಿನವನ್ನು ಶ್ರದ್ಧೆಯಿಂದ ಆಚರಿಸಿದರೆ,
ಪೂರ್ವಿಕರ ಆಶೀರ್ವಾದ , ಪಾಪ ವಿಮೋಚನೆ , ಆರ್ಥಿಕ, ಆರೋಗ್ಯ ಮತ್ತು ಮಾನಸಿಕ ಶಾಂತಿ, ಮೋಕ್ಷ ಪ್ರಾಪ್ತಿ ಎಲ್ಲವೂ ಸಾಧ್ಯವಾಗುತ್ತದೆ.




