ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ Accident – ಅಪಘಾತದ ರಭಸಕ್ಕೆ ಛಿದ್ರ ಛಿದ್ರವಾಗಿ ಬಿದ್ದ ದೇಹಗಳು.

ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಮೂವರು ವಿದ್ಯಾರ್ಥೀಗಳು ದಾರುಣವಾಗಿ ಸಾವನ್ನಪ್ಪಿರು ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯಲ್ಲಿ ನಡೆದಿದೆ. ಇನ್ನು Accident ಕಂಡ ಜನರು ಬೆಚ್ಚಿಬಿದ್ದಿದ್ದಾರೆ
ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ Accident
ದೇವನಹಳ್ಳಿ ತಾಲ್ಲೂಕಿನ ಅಗಲಕೋಟೆ ಕ್ರಾಸ್ನಲ್ಲಿ ನಡೆದಿದೆ. ಅತಿ ವೇಗ ಅಪಾಯ ಅನ್ನೋದು ಗೊತ್ತಿದ್ರೂ ವೇಗವಾಗಿ ಬರ್ತಿದ್ದ ಬೈಕ್, ಮೊದಲಿಗೆ ಡಿವೈಡರ್ ಗೆ ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬರ್ತಿದ್ದ ಲಾರಿಗೂ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಕಲ್ಟ್ ಟ್ರೈಲರ್ ರಿಲೀಸ್ ಇದು – ಭಗ್ನ ಪ್ರೇಮಿಯ ಕತೆ..!!

ಕುಟುಂಬಸ್ಥರಿಗೆ ಆಘಾತ
ಇನ್ನು ಮೃತ ಯುವಕರೆಲ್ಲಾ ಚಿಕ್ಕಜಾಲ, ಹುಣಸಮಾರನಹಳ್ಳಿ ಮೂಲದವರು ಎಂದು ತಿಳಿದು ಬಂದಿದ್ದಾರೆ.
ಯುವಕರೆಲ್ಲಾ ಹುಣಸಮಾರೇನಹಳ್ಳಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿಗಳಾಗಿದ್ದು, ಮಕ್ಕಳನ್ನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಆಘಾತಗೊಂಡಿದ್ದಾರೆ.

ಇದನ್ನು ನೋಡಿ : ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!




