ʻನನಗೆ Surya Kumar ತುಂಬಾ ಮೆಸೇಜ್ ಕಳಿಸ್ತಿದ್ದʼ ಎಂದಿದ್ದ ನಟಿ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ!

ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಕುರಿತು ಬಾಲಿವುಡ್ ನಟಿ ಖುಷಿ ಮುಖರ್ಜಿ ನೀಡಿದ್ದ ಹೇಳಿಕೆ ಇತ್ತೀಚೆಗೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಅದೇ ಹೇಳಿಕೆ ನಟಿಯನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸಿದ್ದು, ಅವರ ವಿರುದ್ಧ ₹100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಘನತೆ ಮತ್ತು ಗೌರವಕ್ಕೆ ಧಕ್ಕೆ
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಅವರು ಜನವರಿ 13ರಂದು ಖುಷಿ ಮುಖರ್ಜಿ ವಿರುದ್ಧ ದೂರು ಸಲ್ಲಿಸಿದ್ದು, ಮುಂಬೈನ ಘಾಜಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.
ಖುಷಿ ಮುಖರ್ಜಿ ಅವರ ಹೇಳಿಕೆಗಳು ಅಂತಾರಾಷ್ಟ್ರೀಯ ಕ್ರಿಕೆಟಿಗ Surya Kumar ಅವರ ಘನತೆ ಮತ್ತು ಗೌರವಕ್ಕೆ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಇಲ್ಲೇಖಿಸಲಾಗಿದೆ.

ಇದನ್ನು ಓದಿ : ನಮ್ಮ ಮೆಟ್ರೋ ದರ ಏರಿಕೆ ತಡೆಗೆ ಸಂಸದ Tejasvi Surya ಪತ್ರ
ನಟಿ ವಿರುದ್ಧ ಕಾನೂನು ಕ್ರಮ
ಖುಷಿ ಮುಖರ್ಜಿ ನೀಡಿದ ಹೇಳಿಕೆಗಳು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ಮಾಡಲ್ಪಟ್ಟಿವೆ. ಇವುಗಳಿಂದ ದೇಶದ ಪ್ರತಿಷ್ಠಿತ ಕ್ರಿಕೆಟಿಗರ ಮಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಟಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸುಳ್ಳು ಹೇಳಿಕೆಗಳಿಗೆ ಸಂಬಂಧಿಸಿದಂತೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕು ಎಂದು ಫೈಜಾನ್ ಅನ್ಸಾರಿ ಒತ್ತಾಯಿಸಿದ್ದಾರೆ.
ವಿವಾದ ಹುಟ್ಟಿದ್ದು ಹೇಗೆ?
ಖುಷಿ ಮುಖರ್ಜಿ ಅವರು ಕ್ರಿಕೆಟಿಗರೊಂದಿಗೆ ಡೇಟ್ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ವಿವಾದ ಅವ್ರೇ ಸೃಷ್ಟಿಸಿದ್ರು.
ಯಾವುದೇ ಕ್ರಿಕೆಟಿಗರನ್ನ ಡೇಟ್ ಮಾಡಲು ತನಗೆ ಇಷ್ಟವಿಲ್ಲ ಎಂದ ಅವರು, ಅನೇಕ ಕ್ರಿಕೆಟಿಗರು ತನಗೆ ಆಸಕ್ತಿ ತೋರಿಸುತ್ತಿದ್ದರು ʻಸೂರ್ಯಕುಮಾರ್ ಯಾದವ್ ಅವರು ಹಿಂದೆ ತನಗೆ ತುಂಬಾ ಮೆಸೇಜ್ ಮಾಡುತ್ತಿದ್ದರುʼ. ಆದರೆ ಈಗ ಅವರು ಮಾತಾಡುತ್ತಿಲ್ಲ ಮತ್ತು ತನ್ನ ಹೆಸರನ್ನ ಅವರೊಂದಿಗೆ ಜೋಡಿಸಬಾರದು ಎಂದೂ ಅವರು ಹೇಳಿದ್ದರು.

ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಇದೀಗ ಕಾನೂನು ಹಾದಿಗೆ ತಿರುಗಿದೆ. ಪ್ರಕರಣ ಸಂಬಂಧ ಪೊಲೀಸರು ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಇದನ್ನು ನೋಡಿ : CONGRESS ಮುಖಂಡನ ಧಮ್ಕಿ CASEಗೆ TWIST – ಧಮ್ಕಿ ರಾಜನ ಕಹಾನಿ ಒಂದೊಂದೆ ರಿವೀಲ್




