BBK S12 : ‘ಬಿಗ್ ಬಾಸ್ ಕನ್ನಡ’ ಸ್ಪರ್ಧಿ ಗಿಲ್ಲಿಯೇ ಗೆಲ್ಲುತ್ತಾರೆ ಎಂದು ನಟ ಶಿವರಾಜ್ಕುಮಾರ್ (ಶಿವಣ್ಣ) ಭವಿಷ್ಯ ನುಡಿದಿದ್ದಾರೆ.

BBK S12 : ಕಾರ್ಯಕ್ರಮವೊಂದರಲ್ಲಿ ಟೇಬಲ್ ತಟ್ಟಿ, “ಗಿಲ್ಲಿಯೇ ಗೆಲ್ಲೋದು” ಎಂದು ಹೇಳಿದ ಶಿವಣ್ಣನ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶಿವರಾಜ್ಕುಮಾರ್ ಮತ್ತು ಗಿಲ್ಲಿ ನಡುವಿನ ಪರಿಚಯ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಲ್ಲಿ ಆರಂಭವಾಗಿದೆ.
ಆ ವೇದಿಕೆಯಲ್ಲಿ ಸ್ಪರ್ಧಿಯಾಗಿದ್ದ ಗಿಲ್ಲಿಯ ಪ್ರತಿಭೆ ಶಿವಣ್ಣನನ್ನು ಭಾರೀ ಇಂಪ್ರೆಸ್ ಮಾಡಿತ್ತು. ಆಗಿನಿಂದಲೇ ಇವರಿಬ್ಬರ ನಡುವೆ ಗಟ್ಟಿಯಾದ ಬಾಂಧವ್ಯ ಇದೆ.

ಗಿಲ್ಲಿಯ ಪ್ರತಿಭೆಗೆ ಶಿವಣ್ಣನ ಮೆಚ್ಚುಗೆ
ಗಿಲ್ಲಿ ತಮ್ಮ ನಟನೆ, ಹಾಸ್ಯ ಮತ್ತು ವೇದಿಕೆಯ ಮೇಲಿನ ಹಾಜರಾತಿಯಿಂದ ಸಾಕಷ್ಟು ಮನರಂಜನೆ ನೀಡಿದ್ದರು.
ಅವರ ಟ್ಯಾಲೆಂಟ್ ನೋಡಿ ಖುಷಿಯಾದ ಶಿವಣ್ಣ, ಈಗ ಬಿಗ್ ಬಾಸ್ ಮನೆಯಲ್ಲಿ ಕೂಡ ಗಿಲ್ಲಿಯೇ ವಿಜೇತರಾಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Tumakuru : ಸೋಪನಹಳ್ಳಿಯಲ್ಲಿ ಮರಿಗಳೊಂದಿಗೆ ಚಿರತೆ ಪ್ರತ್ಯಕ್ಷ

ಪ್ರಸ್ತುತ ಗಿಲ್ಲಿ, ಅಶ್ವಿನಿ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ರಘು ಮತ್ತು ಧನುಶ್ ಸೇರಿದಂತೆ ಹಲವು ಬಲಿಷ್ಠ ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಈ ಪೈಪೋಟಿಯಲ್ಲಿ ಗಿಲ್ಲಿಗೆ ಗೆಲುವು ಸಿಗಲಿದೆ ಎಂದು ಶಿವಣ್ಣ ನಂಬಿಕೆ ವ್ಯಕ್ತಪಡಿಸಿದ್ದಾರೆ.
‘ಆಲ್ ದಿ ಬೆಸ್ಟ್’ ಹೇಳಿದ ಶಿವಣ್ಣ
ಶಿವರಾಜ್ಕುಮಾರ್ ಗಿಲ್ಲಿಗೆ “ಆಲ್ ದಿ ಬೆಸ್ಟ್” ಹೇಳಿರುವುದು ಕೂಡ ಅಭಿಮಾನಿಗಳಿಗೆ ಖುಷಿ ತಂದಿದೆ. ಈ ವಿಡಿಯೋ ವೈರಲ್ ಆಗಿದ್ದು, ಗಿಲ್ಲಿ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.

ಇದಕ್ಕೂ ಮೊದಲು ಗಿಲ್ಲಿ ಬಗ್ಗೆ ಮಾತನಾಡಿದ್ದ ಶಿವಣ್ಣ,“ಗಿಲ್ಲಿಯ ಜೊತೆ ಒಂದು ಸಿನಿಮಾ ಮಾಡಬೇಕು. ಗಿಲ್ಲಿಯನ್ನು ನೋಡಿದಾಗ ತಮಿಳಿನ ಹಾಸ್ಯ ನಟ ಚಂದ್ರಬಾಬು ನೆನಪಾಗುತ್ತಾರೆ. ಅವರು ಅದ್ಭುತ ಕಾಮಿಡಿಯನ್. ಗಿಲ್ಲಿಯ ಜೊತೆ ಖಂಡಿತ ಸಿನಿಮಾ ಮಾಡುತ್ತೇನೆ”
ಎಂದು ಹೇಳಿದ್ದರು.
ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಬಂದಿದ್ದ ನಿರ್ದೇಶಕ ಜೋಗಿ ಪ್ರೇಮ್, ಗಿಲ್ಲಿಗೆ ವಿಶೇಷ ಪ್ರೀತಿ ತೋರಿಸಿದ್ದರು. ಮನೆ ಬಿಡುವಾಗ “ಹೊರಗೆ ಬಂದ ಮೇಲೆ ಸಿಗು” ಎಂದು ಹೇಳಿದ್ದರಿಂದ, ಗಿಲ್ಲಿಗೆ ಸಿನಿಮಾದಲ್ಲಿ ಅವಕಾಶ ಸಿಗಬಹುದು ಎಂಬ ಊಹಾಪೋಹಗಳು ಕೂಡ ಹರಡಿವೆ.
MUST WATCH: LEOPARD ATTACK ON WOMEN | ತೋಟಕ್ಕೆ ಹೋದ ಮಹಿಳೆಯನ್ನು ಚಿರತೆ ಕೊಂದ ಘಟನೆ SHOCKING




