
ASIA CUP 2025: 2025ರ ಏಷ್ಯಾ ಕಪ್ ಸೂಪರ್-4 ಹಂತದಲ್ಲಿದೆ. ಇಂದು ಶ್ರೀಲಂಕಾ ಮತ್ತು ಪಾಕಿಸ್ತಾನ ಮಹತ್ವದ ಪಂದ್ಯವನ್ನಾಡುತ್ತಿದ್ದಾರೆ. ಭಾರತ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಬುಧವಾರ ಆಡಲಿದೆ. ಇನ್ನು ಫೈನಲ್ಗೆ ಯಾವುದೇ ತಂಡ ಅಧಿಕೃತವಾಗಿ ಅರ್ಹತೆ ಪಡೆಯದಿದ್ದರೂ, ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳು ಹೆಚ್ಚು ಎಂಬ ಮಾತು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿದೆ.
ಕಳೆದ ಆವೃತ್ತಿಗಳಲ್ಲಿ ಬಾಂಗ್ಲಾದೇಶ ಹಲವಾರು ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ, ಆದರೆ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದೆ. ಭಾರತವು ತಮ್ಮ ಸತತ ಯಶಸ್ಸಿನಿಂದ ತೀವ್ರ ಪೈಪೋಟಿಗೆ ತಯಾರಾಗಿದ್ದು, ಈ ಬಾರಿ ಬಾಂಗ್ಲಾದೇಶ ವಿರುದ್ಧದ ಫೈನಲ್ಗೆ ಸಾಕಷ್ಟು ಮುನ್ನೋಟಗಳು ವ್ಯಕ್ತವಾಗುತ್ತಿವೆ. ಇದನ್ನೆ ಆಧಾರವಿಟ್ಟು “ಈ ಬಾರಿಯ ಫೈನಲ್ ಭಾರತ vs ಬಾಂಗ್ಲಾದೇಶ ಆಗುವುದು ನಿಶ್ಚಿತ” ಎಂಬ ಅಭಿಪ್ರಾಯವನ್ನು ಅಭಿಮಾನಿಗಳು ಹಾಗೂ ವಿಶ್ಲೇಷಕರು ಹಂಚಿಕೊಳ್ಳುತ್ತಿದ್ದಾರೆ.
4 ಸುತ್ತಿನ ನಂತರ, ಏಷ್ಯಾಕಪ್ 2025 ಸೆಪ್ಟೆಂಬರ್ 28 ರ ಭಾನುವಾರದಂದು ಫೈನಲ್ನಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಪ್ರಶಸ್ತಿ ಹಣಾಹಣಿಯ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾತ್ರಿ 8 ಗಂಟೆಗೆ ಶುರುವಾಗಲಿದೆ.




