ಮನೆ ಊಟದ ವಿಷಯದಲ್ಲಿ ತೀರ್ಪು ಮಾರ್ಪಾಡು ಮಾಡಿದ ಕೋರ್ಟ್; Pavithra Gowda ಗೆ ಶಾಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡಗೆ ಮೊದಲು 57ನೇ ಸಿಸಿಹೆಚ್ ಕೋರ್ಟ್ ವಾರಕ್ಕೆ ಹಲವು ಬಾರಿ ಮನೆ ಊಟ ನೀಡಲು ಆದೇಶ ನೀಡಿತ್ತು. ಆದರೆ, ಜೈಲಾಧಿಕಾರಿಗಳು ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಫುಡ್ ಪಾಯಿಸನ್ ಸಮಸ್ಯೆ
ಇದನ್ನು ಪರಿಗಣಿಸಿದ ನ್ಯಾಯಾಲಯ, ಮನೆ ಊಟದ ಆದೇಶವನ್ನು ಪರಿಷ್ಕರಿಸಿ, ವಾರಕ್ಕೆ ಒಮ್ಮೆ ಮಾತ್ರ ಮನೆ ಊಟ ನೀಡಲು ಆದೇಶಿಸಿದೆ. ಪವಿತ್ರಾ ಗೌಡ ಜೈಲೂಟದಿಂದ ಚರ್ಮರೋಗ ಮತ್ತು ಫುಡ್ ಪಾಯಿಸನ್ ಸಮಸ್ಯೆ ಎದುರಿಸುತ್ತಿರುವುದಾಗಿ ವಾದಿಸಿದ್ದರು.
ಇದನ್ನು ಓದಿ : AI ಯುವತಿಯ ಮೋಹಕ್ಕೆ ಬಿದ್ದು 1.53 ಲಕ್ಷ ಕಳ್ಕೊಂಡ ಯುವಕ!

ಪವಿತ್ರಾಗೆ ಶಾಕ್- ಏನದು?
ಜೈಲಾಧಿಕಾರಿಗಳು, ಜೈಲಿನ ಊಟ ಶುಚಿತ್ವದಿಂದ ಕೂಡ ಉತ್ತಮವಾಗಿದೆ ಎಂದು ಪ್ರತಿವಾದ ನೀಡಿದ್ದರು. “ಈವರೆಗೂ ಜೈಲಿನಲ್ಲಿ ಊಟ ಮಾಡಿದ ಯಾವುದೇ ಕೈದಿಗೆ ಹಾನಿ ಆಗಿಲ್ಲ” ಎಂದು ವಾದ ಮಾಡಿದರು.
ತೀರ್ಪು ಮಾರ್ಪಾಡು ಮಾಡಿದ ಕೋರ್ಟ್
ಜೈಲಧಿಕಾರಿಗಳ ವಾದವು ನ್ಯಾಯಾಲಯಕ್ಕೆ ಸರಿ ಎನಿಸಿದೆ. ಹೀಗಾಗಿ, 57 ನೇ ಸಿಸಿಹೆಚ್ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡಿದೆ. ವಾರಕ್ಕೆ ಒಮ್ಮೆ ಮಾತ್ರ ಊಟ ನೀಡಲು ಆದೇಶ ಕೊಟ್ಟಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ Pavithra Gowda ಎ1 ಆರೋಪಿ ಆಗಿದ್ದಾರೆ. ದರ್ಶನ್ ಅವರು ಎ2 ಆರೋಪಿ ಆಗಿದ್ದಾರೆ. ಈ ಪ್ರಕರಣದಲ್ಲಿ ಒಟ್ಟೂ 17 ಆರೋಪಿಗಳು ಇದ್ದಾರೆ. ಸದ್ಯ ಕೆಳ ಹಂತದ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇದನ್ನು ನೋಡಿ : ACCI*DENT ZONE ಆದ ತಡಸ – ಶಿರಸಿ ರಸ್ತೆ ಈ ರೋಡ್ ನಲ್ಲಿಓಡಾಡುವ ಮುನ್ನ ಹುಷಾರ್




