Bangalore ನಲ್ಲಿ ಡೇಟಿಂಗ್ ಆ್ಯಪ್ನಲ್ಲಿ ಮೋಹದ ಜಾಲಕ್ಕೆ ಬಿದ್ದು, ಯುವಕನೊಬ್ಬ 1.53 ಲಕ್ಷ ಕಳ್ಕೊಂಡಿದ್ದಾನೆ.

AI ಯುವತಿಯ ಮೋಹಕ್ಕೆ ಬಿದ್ದು ಯುವಕನೊಬ್ಬ ಒಂದೂವರೆ ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ. Bangalore ನ 26 ವರ್ಷದ ಯುವಕನೊಬ್ಬ Happn ಡೇಟಿಂಗ್ ಆ್ಯಪ್ನಲ್ಲಿ ಖಾತೆ ತೆರೆದಿದ್ದ. ಈ ಖಾತೆಗೆ “ಇಶಾನಿ” ಎಂಬ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಬಳಿಕ ಮೊಬೈಲ್ ನಂಬರ್ ಶೇರ್ ಆಗಿ ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ್ದರು.
AI ಯುವತಿಯ ಮೋಹಕ್ಕೆ ಬಿದ್ದ ಯುವಕ
ಕೆಲ ದಿನಗಳ ಹಿಂದೆ ಯುವತಿಯ ಮೊಬೈಲ್ನಿಂದ ವಿಡಿಯೋ ಕಾಲ್ ಬಂದಿದೆ. ಆ ವಿಡಿಯೋ ಕಾಲ್ನಲ್ಲಿ ಯುವತಿ ಬೆತ್ತಲಾಗಿದ್ದಳು. ನಂತರ ನೀನು ಬಟ್ಟೆ ಬಿಚ್ಚು ಎಂದು ಯುವಕನ ಬಟ್ಟೆ ಬಿಚ್ಚಿಸಿದ್ದಳು. ಯುವಕ ಬೆತ್ತಲಾಗಿದ್ದನ್ನ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಗಳು ನಂತರ ಯುವಕನಿಗೆ ಆತನ ಬೆತ್ತಲೆ ಫೋಟೊಗಳನ್ನು ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ.
ಇದನ್ನು ಓದಿ : ಪೂಜಾ ಸಾಮಗ್ರಿಗಳನ್ನ ತರಲು ಹೋಗಿ ಯುವಕ ದಾರುಣ ಸಾವು

1.53 ಲಕ್ಷ ಲೂಟಿ
ಯುವಕನಿಂದ ಹಂತ ಹಂತವಾಗಿ ಯುವಕನಿಂದ 1.53 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಇನ್ನುನ ಹಣ ಹೆಚ್ಚಾಗಿ ಕೇಳಿದಾಗ, ಯುವಕ ಕೇಂದ್ರ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ, ಈ ಕೃತ್ಯವು AI ಯುವತಿ ಹೋಲುವ ಪ್ರೊಫೈಲ್ ಮೂಲಕ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣ ದಾಖಲು
ಸದ್ಯ, ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾರ್ವಜನಿಕರಿಗೆ, ಡೇಟಿಂಗ್ ಆ್ಯಪ್ಸ್ನಲ್ಲಿ ಶಂಕಾಸ್ಪದ ವ್ಯಕ್ತಿಗಳೊಂದಿಗೆ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನು ನೋಡಿ : ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬರ ಕೊ*ಲೆ – ಬೆಚ್ಚಿಬಿದ್ದ ಕೆಂಕೆರೆ ಗ್ರಾಮದ ಜನ




