ಗಂಡನ ಜೊತೆ ಜಗಳವಾಡಿ ಮನನೊಂದು ಪತ್ನಿ ನೇಣು ಬಿಗಿದುಕೊಂಡು Suicide ಮಾಡಿಕೊಂಡಿದ್ದಾರೆ.

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಗಾಧೆ ಮಾತಿದೆ. ಇದು ಆಗಿನ ಕಾಲದ ಮಾತು, ಗಂಡ ಹೆಂಡತಿಯ ನಡುವೆ ಎಷ್ಟೇ ಗಲಾಟೆಯಾದ್ರು, ಭಿನ್ನಾಬಿಪ್ರಾಯ ಇದ್ರೂ, ಎಂಥಾ ದೊಡ್ಡ ಸಮಸ್ಯೆ ಇದ್ದರೂ ಕೂಡ ಹೇಗೋ ಜೀವನ ಮುನ್ನೆಡೆಸಿಕೊಂಡು ಹೋಗ್ತಿದ್ದರು. ಆದ್ರೀಗ ಕಾಲ ಬದಲಾಗಿದೆ.
200 ರೂಪಾಯಿಗಾಗಿ ಗಂಡ-ಹೆಂಡತಿ ಮಧ್ಯೆ ಗಲಾಟೆ
ಕೇವಲ 200 ರೂಪಾಯಿ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆ ನಡೆದು, ಮನನೊಂದು ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ನೇಣಿಗೆ ಕೊರಳೊಡ್ಡಿದ ಹೆಂಡತಿ
ಮೃತರನ್ನು ಸುಮಾ (30) ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳ ತಾಯಿ ಸುಮಾ ನೇಣು ಬಿಗಿದುಕೊಂಡು Suicide ಮಾಡಿಕೊಂಡಿದ್ದಾರೆ. ಇನ್ನು ಸುಮಾ ಸುಮಾರು 8 ವರ್ಷಗಳ ಹಿಂದೆ ಚಂದ್ರಶೇಖರ್ ಅವರೊಂದಿಗೆ ವಿವಾಹವಾಗಿದ್ದರು.

ಇದನ್ನು ಓದಿ : Bengaluru ಕೇಂದ್ರೀಯ ವಿದ್ಯಾಲಯಕ್ಕೆ ಬಾಂಬ್ ಬೆದರಿಕೆ
ನಿಜಕ್ಕೂ ಆಗಿದ್ದೇನು?
ಧರ್ಮಸ್ಥಳ ಸ್ವಸಹಾಯ ಸಂಘದ ಕಂತು ಕಟ್ಟಲೆಂದು ಸುಮಾ ಗಂಡನಿಗೆ ಕಾಣದಂತೆ 1,300 ರೂ. ಮನೆಯಲ್ಲಿಟ್ಟಿದ್ದರು. 1,300 ರೂ. ಪೈಕಿ ಚಂದ್ರಶೇಖರ್ ಸಬೂಬು ಹೇಳಿ 200 ರೂ. ಸ್ವಂತ ಖರ್ಚಿಗೆ ಬಳಸಿದ್ದ. ಈ ಸಂಬಂಧ ಶುಕ್ರವಾರ ಬೆಳಗ್ಗೆ ಇಬ್ಬರ ನಡುವೆ ಗಲಾಟೆ ನಡೆದಿತ್ತು
ಘಟನೆಯ ದಿನ ಪತಿ ಹಾಗೂ ಅತ್ತೆ ಕೆಲಸಕ್ಕೆ ತೆರಳಿದ್ದ ವೇಳೆ ಸುಮಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದಾಗ ಪತಿಗೆ ಈ ದುರ್ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದ್ದು, ಸುಮಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.
ಇದನ್ನು ನೋಡಿ : ತುಮಕೂರು ಪಾಲಿಕೆಯ ನೂತನ ಆಯುಕ್ತರಾಗಿ SHUBA .B ಅಧಿಕಾರ ಸ್ವೀಕಾರ




