ಬೆಂಗಳೂರಲ್ಲಿ ಅನಾರೋಗ್ಯದಿಂದ ಬೇಸತ್ತು ಇಂಜಿನಿಯರಿಂಗ್ ವಿದ್ಯಾರ್ಥಿ Suicide.

ಬೆಂಗಳೂರು ನಗರದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಅಪಾರ್ಟ್ಮೆಂಟ್ನ 16ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ Suicide ಮಾಡಿಕೊಂಡಿದ್ದಾನೆ.
16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ!
ಮೃತ ವಿದ್ಯಾರ್ಥಿಯನ್ನು ನಿಕ್ಷೇಪ ಬಂಗೇರ (26) ಎಂದು ಗುರುತಿಸಲಾಗಿದೆ. ಮಂಗಳೂರು ಮೂಲದ ನಿಕ್ಷೇಪ ಬಂಗೇರ, ಬೆಂಗಳೂರಿನ ಬಾಗಲಗುಂಟೆಯಲ್ಲಿರುವ ಪ್ರಿನ್ಸ್ ಅಪಾರ್ಟ್ಮೆಂಟ್ನಲ್ಲಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದನು.
ಇದನ್ನು ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ವೃದ್ಧೆ ಮಹಿಳೆಯ ಶವ ಪತ್ತೆ

ಮನನೊಂದು ಆತ್ಮಹತ್ಯೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿಕ್ಷೇಪ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದನು ಎನ್ನಲಾಗಿದ್ದು, ಅದೇ ವಿಚಾರದಿಂದ ಮನನೊಂದು ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ನೋಡಿ : ನವದಂಪತಿ ಮೇಲೆ ಹಲ್ಲೆ ಕೇಸ್ – 3 ತಿಂಗ್ಳಿಗೆ ಒಬ್ಬೊಬ್ಳು ಹೆಂಡ್ತಿನ ಚೇಂಜ್ ಮಾಡ್ತಿದ್ದ ಈ ಖತರ್ನಾಕ್ ಸಂದೀಪ

ಇದನ್ನು ನೋಡಿ : ಸಿಎಂ ದಾಖಲೆಗೆ ಸಂಭ್ರಮವೋ..ಸಂಭ್ರಮ – ಸಬ್ಬೇನಹಳ್ಳಿಯಲ್ಲಿ ಬಿರಿಯಾನಿ ವಿತರಣೆ




