
NELAMANGALA NEWS : ಹಿರಿಯ ನಟಿ ಹಾಗೂ ತಾಯಿ ಲೀಲಾವತಿ ಅವರ ಸ್ಮರಣಾರ್ಥವಾಗಿ, ಮಕ್ಕಳ ಅನ್ನ ದಾಸೋಹ ಸಂಗ್ರಹ ಸೇವೆಗೆ ನೆರವಾಗುವ ಉದ್ದೇಶದಿಂದ ನಟ ವಿನೋದ್ ರಾಜ್ ಅವರು ಮಾರುತಿ ಕಂಪನಿಯ ಹೊಸ ಕಾರುಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಬೆಂಗಳೂರಿನ ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿ ಇರುವ ತೋಟದಲ್ಲಿ, ಬಾಗಲಕೋಟೆಯ ಮಹಾಂತ ಮಂದಾರ ಮಠ ಬನಹಟ್ಟಿ ಪೂಜ್ಯ ಶ್ರೀ ಮಹಾಂತ ದೇವರು ಸ್ವಾಮೀಜಿಗಳಿಗೆ ಅವರು ಕಾರು ಹಸ್ತಾಂತರಿಸಿದರು.ಈ ವೇಳೆ ಕಾರಿಗೆ ದೃಷ್ಟಿ ತೆಗೆದು, ನಿಂಬೆಹಣ್ಣು ಒಡೆದು ಶ್ರೀಗಳು ಕಾರು ಚಾಲನೆ ಮಾಡಿದರು.
ಇದಕ್ಕೂ ಮುನ್ನ ಲೀಲಾವತಿ ಅವರ ಹೆಸರಿನಲ್ಲಿ ಸಾರ್ವಜನಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ರಸ್ತೆ ರಿಪೇರಿ ಮುಂತಾದ ಸಾಮಾಜಿಕ ಸೇವೆಗಳಲ್ಲಿ ತೊಡಗಿಕೊಂಡಿದ್ದ ವಿನೋದ್ ರಾಜ್ ಅವರು, ಇದೀಗ ಅನ್ನ ದಾಸೋಹ ಸೇವೆಗೆ ಬಲ ನೀಡುವ ಮೂಲಕ ತಮ್ಮ ಸಮಾಜನಿಷ್ಠೆ ತೋರಿಸಿದ್ದಾರೆ.




