ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆಂದು ಗೊತ್ತಿಲ್ಲ – CM ಸಿದ್ದು.

ಕರ್ನಾಟಕದ ಇತಿಹಾಸದಲ್ಲಿ ದೇವರಾಜು ಅರಸು ಬಳಿಕ ದೀರ್ಘಾವಧಿ ಮುಖ್ಯಮಂತ್ರಿ ಆಗಿ ಸಿಎಂ ಸಿದ್ದರಾಮಯ್ಯ ಇಂದು ದಾಖಲೆ ಮುರಿದಿದ್ದಾರೆ. ನಿನ್ನೆ ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ ಎಂದು ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ ಇಂದು ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆ ಎಂದು ಗೊತ್ತಿಲ್ಲ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಈ ಒಂದು ಹೇಳಿಕೆಯು ಇದೀಗ ಸಂಚಲನ ಸೃಷ್ಟಿಸಿದೆ.
ಇದನ್ನು ಓದಿ : ಬೆಚ್ಚಿ ಬೀಳಿಸೋ ಕೃತ್ಯ – ಮುಗ್ಧ ಮಗುವಿನ ಕತ್ತು ಹಿಸುಕಿ Murder!
ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆಂದು ಗೊತ್ತಿಲ್ಲ
ಹಾವೇರಿಯಲ್ಲಿ ಮಾಧ್ಯಮಗಳಿಗೆ ಮಾತನಾಡಿದ Cm ಸಿದ್ದು “ಜನರ ಆಶೀರ್ವಾದವಿರುವವರೆಗೂ ನಾನು ಕೆಲಸ ಮಾಡುತ್ತೇನೆ. ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆ ಎಂದು ನನಗೆ ಗೊತ್ತಿಲ್ಲ. ರಾಜಕೀಯದಲ್ಲಿ ಈವರೆಗೆ ಮಾಡಿದ ಕೆಲಸ ತೃಪ್ತಿಯ ತರುತ್ತದೆ” ಎಂದು ಹೇಳಿದ್ದಾರೆ.
CM ಹೇಳಿಕೆ ಸಂಚಲನ ಸೃಷ್ಟಿಸಿದೆ
ಇನ್ನು ಈ ಹೇಳಿಕೆಯು ಸಾರ್ವಜನಿಕರಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ತಮ್ಮ ದೀರ್ಘಾವಧಿ ಅಧಿಕಾರವನ್ನು ಜನರ ಬೆಂಬಲದಿಂದ ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ ಎಂದು ಹಾವೇರಿಯಲ್ಲಿ ಅವರು ತಿಳಿಸಿದ್ದಾರೆ.
ಇದನ್ನು ನೋಡಿ : ಸಿದ್ದರಾಮಯ್ಯಗೆ ಟವೆಲ್ ಸುತ್ಕೊಂಡು ಹೊಡೆದ್ರಾ ಶಾಸಕ ಎಂ.ಟಿ.ಕೃಷ್ಣಪ್ಪ




