ನಟ Yash ಜನ್ಮದಿನದ ಅಂಗವಾಗಿ, ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಪ್ರಯುಕ್ತ, ಬೆಂಗಳೂರಿನ ‘ನಮ್ಮ ಮೆಟ್ರೋ’ ರೈಲಿನ ಮೇಲೆ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿ ವಿನೂತನವಾಗಿ ಶುಭ ಕೋರಲಾಗಿದೆ. ಇದು ಅಭಿಮಾನಿಗಳ ಕಾರ್ಯವೋ ಅಥವಾ ‘ಟಾಕ್ಸಿಕ್’ ಚಿತ್ರತಂಡದ ಪ್ರಚಾರ ತಂತ್ರವೋ ಎಂಬ ಚರ್ಚೆ ಶುರುವಾಗಿದೆ. ಸ್ಯಾಂಡಲ್ವುಡ್ನ ‘ರಾಕಿಂಗ್ ಸ್ಟಾರ್’ ಯಶ್ ಅವರಿಗೆ ಜನವರಿ 8 ರಂದು ಹುಟ್ಟುಹಬ್ಬದ ಸಂಭ್ರಮ.

ಮೆಟ್ರೋ ರೈಲಿನಲ್ಲೂ ‘ಯಶ್’ ಹವಾ
2026ಕ್ಕೆ 39 ವರ್ಷಗಳನ್ನು ಪೂರೈಸಿ 40ನೇ ವರ್ಷಕ್ಕೆ ಕಾಲಿಡುತ್ತಿರುವ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಈ ಬಾರಿ Yash ಹುಟ್ಟುಹಬ್ಬದ ಸಂಭ್ರಮವು ಸಿಲಿಕಾನ್ ಸಿಟಿಯ ಲೈಫ್ ಲೈನ್ ‘ನಮ್ಮ ಮೆಟ್ರೋ’ ಹಳಿಗಳ ಮೇಲೂ ಸದ್ದು ಮಾಡುತ್ತಿದೆ.
ಇದನ್ನು ಓದಿ : ರಾಜ್ಯದಲ್ಲಿ ಮತ್ತೆ ಮುಂದುವರಿದ ಚುಮು ಚುಮು ಚಳಿ

Yash ಅವರ ಬೃಹತ್ ಚಿತ್ರವಿರುವ ಜಾಹೀರಾತು
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇತ್ತೀಚೆಗೆ ಮೆಟ್ರೋ ರೈಲುಗಳಲ್ಲಿ ಜಾಹೀರಾತು ಅಳವಡಿಸಲು ಅವಕಾಶ ನೀಡಿದೆ. ಇದನ್ನು ಅಭಿಮಾನಿಗಳು ಅಥವಾ ಸಿನಿಮಾ ತಂಡ, ಇಡೀ ಮೆಟ್ರೋ ರೈಲಿನ ಮೇಲ್ಭಾಗದಲ್ಲಿ ಯಶ್ ಅವರ ಬೃಹತ್ ಚಿತ್ರವಿರುವ ಜಾಹೀರಾತನ್ನು ಅಳವಡಿಸಿದ್ದಾರೆ. ಇನ್ನು ಈ ಮೂಲಕ ಯಶ್ ಅವರಿಗೆ ಅದ್ಧೂರಿಯಾಗಿ ಜನ್ಮದಿನದ ಶುಭ ಕೋರಲಾಗಿದ್ದು, ಯಶ್ ಚಿತ್ರವಿರುವ ಮೆಟ್ರೋ ರೈಲು ಸಂಚರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿವೆ.

ವ್ಯಕ್ತಿಯೊಬ್ಬರ ಫೋಟೋ ಈ ಮಟ್ಟಕ್ಕೆ ಪ್ರದರ್ಶನವಾಗುತ್ತಿರುವುದು ಇದೇ ಮೊದಲು
ಯಶ್ ಅವರ ಸ್ನೇಹಿತರು ಈ ಜಾಹೀರಾತು ನೀಡಿದ್ದು, ತಮ್ಮ ಶುಭ ಕೋರುವ ಫೋಟೋವನ್ನೂ ಅಳವಡಿಸಿರುವುದು ತಿಳಿದು ಬಂದಿದೆ. ಇನ್ನು ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರ ಫೋಟೋ ಈ ಮಟ್ಟಕ್ಕೆ ಪ್ರದರ್ಶನವಾಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

ಇದನ್ನು ನೋಡಿ : D MART ಐಟಂನಲ್ಲಿ ಹುಳು? ರೊಚ್ಚಿಗೆದ್ದ ಗ್ರಾಹಕರು




